ಕಾಗವಾಡ: ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಆತ್ಮ ರಕ್ಷಣೆಗಾಗಿ ಕರಾಟೆ ಒಂದು ಉತ್ತಮ ಸಾಧನೆಯಾಗಿದೆ ಎಂದು ಜಪಾನ ಯಮಾಬುರೆ ಸಿತೊ ರೋಯು ಕರಾಟೆ ಡು ಅಸೋಸಿಯೇಷನ್ ರಾಷ್ಟ್ರೀಯ ಮುಖ್ಯಸ್ಥ ಮನೋಜಕುಮಾರ ರಜಪೂತ ಹೇಳಿದರು.
ಅವರು ರವಿವಾರ ದಿ.11 ರಂದು ಪಟ್ಣಣದ ಮಲ್ಲಿಕಾರ್ಜುನ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ ಡಿಫೆನ್ಸ್ ಮತ್ತು ಕರಾಟೆ ಅಸೋಸಿಯೇಷನ್ ಇವರ ವತಿಯಿಂದ ಕರಾಟೆ ಪಟುಗಳಿಗೆ ಬೆಲ್ಟ್ ವಿತರಣೆ ಮಾಡಿ ಮಾತನಾಡುತ್ತಿದ್ದರು. ಜಪಾನಿ ಯಮಾಬುಕಿ ಸಿತೊ ರುಯಿ ಕರಾಟೆ ಅಸೋಸಿಯೇಷನ್ ಅವರು ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಕರಾಟೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಮಕ್ಕಳ ಆತ್ಮ ರಕ್ಷಣೆ ಬಲ ಹೆಚ್ಚಿಸುವದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಕರಾಟೆ ಕ್ರೀಡಾ ಕೂಟದಲ್ಲಿ ಪ್ರತಿಶತ ಅಂಕದೊAದಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತಿದ್ದು, ಭವಿಷ್ಯದಲ್ಲಿ ಈ ಭಾಗದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಕೋಟಾದಡಿಯಲ್ಲಿ ಉತ್ತಮ ಅವಕಾಶಗಳನ್ನು ಪಡೆದು, ನಮ್ಮ ಭಾಗದ ಕೀರ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ರಾಣಿ ಚೆನ್ನಮ್ಮ ಸೆಲ್ಫ ಡಿಫೆನ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ರಾಜು ಪಾಟೀಲ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಆತ್ಮ ರಕ್ಷಣೆಗಾಗಿ ಕರಾಟೆ ಕಲಿಯುವದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಪಿಎಸ್‌ಐ ಮಲಕನಗೌಡಾ ಬಿರಾದಾರ, ಕಾಕಾ ಪಾಟೀಲ್, ಕರಾಟೆ ಕೋಚ್‌ಗಳಾದ ಪ್ರಶಾಂತ ಅಗಸರ, ಅನೀಲ ಭಜಂತ್ರಿ, ಕಿರಣ ಭಜಂತ್ರಿ, ರೋಹಿತ ಮಾಳಿ, ದೀಪಕ ಪಾಟೀಲ್, ಅಭಿಷೇಕ ಅನೂರೆ, ಪ್ರೀಯಾಂಕಾ ಪಾಟೀಲ್, ಪ್ರಜ್ವಲ ಕಾಂಬಳೆ, ಆಯುಷ್ ನಾಯಿಕ, ವೇದಿಕಾ ಜಾಧವ, ಚೇತನ ಭಜಂತ್ರಿ, ಶ್ರೀ ಕಾಂಬಳೆ ಸೇರಿದಂತೆ ನೂರಾರು ಕರಾಟೆ ಪಟುಗಳು ಉಪಸ್ಥಿತರಿದ್ದರು.