ಬೆಳಗಾವಿ: ಬೆಳಗಾವಿಯ ರಾಮನಗರದಲ್ಲಿರುವ ಧರ್ಮನಾಥ ಭವನದ ಹತ್ತಿರ ಚಂದ್ರಕಾಂತ ಕಾಗವಾಡ ಅವರ ಬಾಯ್ಸ್ ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ನಡೆದಿದೆ.
ಬೆಳಗಾವಿ ಜಿಲ್ಲಾ ರಾಯಭಾಗ ತಾಲೂಕಿನ ಬಾವನಸವದತ್ತಿ ಗ್ರಾಮದ ನಿವಾಸಿ ಪ್ರಜ್ವಲ್ ಕುಪ್ಪಾನಟ್ಟಿ (20ವರ್ಷ) ಆತ್ಮಹತ್ಯೆ ಶರಣಾಗಿದ್ದಾನೆ .
ಸೋಮವಾರ ಕಾಲೇಜಿಗೆ ಹೋಗದೆ ಹಾಸ್ಟೆಲ್‌ನಲ್ಲಿಯೇ ಇದ್ದು ಪ್ರಜ್ವಲ್ ನೇಣು ಹಾಕಿಕೊಂಡಿರುವುದು ಘಟನೆ ಸಂಜೆ ವೇಳೆ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದ ಬಳಿಕ ಪೊಲೀಸರು ಪರಿಶೀಲನೆ ನಡೆಸಿ ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.