ಅಥಣಿ: ಅಥಣಿ ಮತಕ್ಷೇತ್ರದ ಪೂರ್ವಭಾಗದಲ್ಲಿ ಇರುವ 75 ಸಾವಿರ ಎಕರೆಗಿಂತ ಹೆಚ್ಚು ರೈತರ ಜಮೀನುಗಳಿಗೆ ನೀರಾವರಿ ಒದಗಿಸುವ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ಯೋಜನೆ ಕೊಟ್ಟಲಗಿ ಹಾಗೂ ಕಕಮರಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಝಂಜರವಾಡ ಗ್ರಾಮದಲ್ಲಿ ನಡೆಯುತ್ತಿರುವ ಜಾಕ್ ವೆಲ್ ಕಮ್ ಪಂಪ್ ಹೌಸ್ ನ ರಾಫ್ಟ್ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಚಾಲನೆ ನೀಡಿದರು
ಬಳಿಕ ಕಾರ್ಯಕ್ರಮ ಉದೇಶಿ ಮಾತನಾಡಿದ ಅವರು ಇನ್ನು 20 ತಿಂಗಳುಗಳಲ್ಲಿ ಕೊಟ್ಟಲಗಿ ಶ್ರೀ ಸಿದ್ದೇಶ್ವರ ಹಾಗೂ ಕಕಮರಿ ಶ್ರೀ ಅಮ್ಮಾಜೇಶ್ವರಿ ತಾಯಿಗೆ ಅಭಿಷೇಕ ಮಾಡಿ ರೈತರ ಜಮೀನುಗಳಿಗೆ ನಿರೀನ್ನು ಹರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಝುಂಜರವಾಡ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮದ ಹಿರಿಯರು ಮುಖಂಡರು ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.