ಅಥಣಿ:- ಶಾಸಕ ಲಕ್ಷ್ಮಣ ಸವದಿ ಅವರು ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮತ್ತೋಮ್ಮೆ ಶಂಕುಸ್ಥಾಪನೆ ಮಾಡಲು ಮುಂದಾಗಿದ್ದು ವಿಷಾದನೀಯ ಎಂದು ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಅಸಮಾಧಾನ ವ್ಯಕ್ತಪಡಿಸಿದರು
ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಅಧಿಕಾರ ಅವಧಿಯಲ್ಲಿ ರಮೇಶ್ ಜಾರಕಿಹೋಳಿ ನೀರಾವರಿ ಮಂತ್ರಿ ಇದ್ದಾಗ ಟೆಂಡರ್ ಆಗಿತ್ತು ಆ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮ ಬೇರೆ ಕಡೆ ನಿಗದಿಯಾದ ಕಾರಣ ಹುಕ್ಕೇರಿ,ಅರಭಾವಿ,ಅಥಣಿ, ಮತ್ತು ಗೋಕಾಕ ಕಾಮಗಾರಿಗಳಿಗೆ ಗೋಕಾಕದಲ್ಲಿ ಶಂಕು ಸ್ಥಾಪನೆ ಮಾಡಿದ್ದರು.
ಈಗಿನ ಸರ್ಕಾರದವರು ಮೊದಲು ಮಾಡಿದ್ದ ಶಂಕು ಸ್ಥಾಪನೆ ಮತ್ತೊಮ್ಮೆ ಶಂಕುಸ್ಥಾಪನೆ ಮಾಡಿದ್ದಾದರೆ ಹಕ್ಕು ಚ್ಯುತಿ ಆಗುವದು ಅಲ್ಲದೆ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಘನತೆಗೆ ಧಕ್ಕೆ ತರುತ್ತದೆ ಎಂದರು
ಈಗಿನ ಶಾಸಕರು ಆಗ ಎಮ್ ಐ ಪ್ರತ್ಯೇಕ ಮಾಡುವದಾಗಿ ಹೇಳಿದಾಗ ನಾವು ಬೇಡ ಅಂದಿದ್ದೆವು ಅದರಿಂದ ನನಗೆ ಮತ್ತೆ ಕಾಮಗಾರಿ ಐದಾರು ತಿಂಗಳು ವಿಳಂಬವಾಯಿತು.
ರೈತರಿಗೆ ಅನುಕೂಲ ಆಗಬೇಕಿದ್ದ ಯೋಜನೆ ವಿಳಂಬ ಮಾಡಿ ಈಗ ಮತ್ತೆ ಶಂಕು ಸ್ಥಾಪನೆ ಮಾಡುತ್ತಿದ್ದು ನಾವು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು
ಕಾಮಗಾರಿ ಪೂರ್ಣಗೊಳಿಸಿ ಬೇಕಿದ್ದರೆ ಉದ್ಘಾಟನೆ ಮಾಡಲಿ ಆಗ ನಾವು ಸ್ವಾಗತಿಸುತ್ತೇವೆ.
ಹದಿನೈದು ವರ್ಷಗಳಿಂದ ಈ ಯೋಜನೆಗಾಗಿ ಹೋರಾಟ ಮಾಡುತ್ತ ಬಂದಿದ್ದೇವೆ.
ಶಾಸಕರಿಗೆ 2004 ರಿಂದ ಇಲ್ಲಿಯವರೆಗೆ ಈ ಯೋಜನೆಯ ಕನಸು ಬಿದ್ದೀಲ್ಲವೆ ಎಂದು ಸ್ಥಳಿಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
1600 ಕೃಷಿ ಹೊಂಡ ಸುಮಾರು 21 ಕೆರೆ ತುಂಬುವ ಯೋಜನೆ ಡಿಪಿಆರ್ ಮಾಡಿದ್ದು ಆಗ ವಿಧಾನಪರಿಷತ್ ಸದಸ್ಯರು ಆಗಿದ್ದ ಸವದಿ ವೈಯಕ್ತಿಕ ವಾಗಿ ಡಿಪಿಆರ್ ಮಾಡಲು ಮುಂದಾಗಿದ್ದು ಅನಿವಾರ್ಯವಾಗಿ ಆಗ ಡಿಪಿಆರ್ ಮತ್ತೆ ಮಾಡಲು ವಿಳಂಬವಾಯಿತು ನಾನು ಕೂಡ ರೈತನಿದ್ದು ತೆಲಸಂಗದಲ್ಲಿ ನನ್ನ ಜಮೀನು ಇದೆ ನಮಗೂ ರೈತರ ಬಗ್ಗೆ ಕಾಳಜಿ ಇದೆ.
ತರಾತುರಿಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೀರಿ ಎಂಬ ಆರೋಪದ ಬಗ್ಗೆ ಉತರಿಸಿದ ಅವರು
ತರಾತುರಿ ಅನ್ನುವ ಪ್ರಶ್ನೆಯೇ ಇಲ್ಲ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕ ವಾಗಿ ಎಲ್ಲವೂ ಆಗಿರುವ ಯೋಜನೆ.
ನಾನು ಈಗ ಒಂದು ಪ್ರಶ್ನೆ ಕೇಳಬೇಕಾಗುತ್ತದೆ ದತ್ತಕ ಪಡೆದು ಹೆಸರಿಟ್ಟರೆ ಹೇಗೆ.
ಈ ಯೋಜನೆಯ ಡಿ ಎನ್ ಎ ಟೆಸ್ಟ ಮಾಡಿದರೆ ಈ ಯೋಜನೆ ಬಿಜೆಪಿಯದ್ದು ಎಂದು ಖಾರವಾಗಿ ಹೇಳಿದರು
ಇದೆ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದಪ್ಪಾ ಮುದಕನ್ನವರ, ಬಿಜೆಪಿ ಮುಖಂಡರಾದ ಗೀರಿಶ ಬುಟಾಳಿ, ಉಮೇಶ್ ರಾವ್ ಬಂಟೋಡಕರ್, ಅನೀಲ ಸೌದಾಗರ, ಬಿಜೆಪಿ ಮಂಡಲ ಅಧ್ಯಕ್ಷ ರವಿ ಸಂಖ, ಸೇರಿದಂತೆ ಹಲವರು ಉಪಸ್ಥಿತರಿದ್ದರು