ಅಥಣಿ: ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 20 ಮತ್ತು 21 ರಲ್ಲಿ ನಗರೊತ್ತಾನ ಯೋಜನೆಯಡಿ ಒಂದು ಕೊಟಿ ಹದಿನಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಜಿ ಡಿಸಿಎಂ ಹಾಲಿ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು
ಮುಖ್ಯ ರಸ್ತೆಯಿಂದ ಪ್ರಾರಂಭವಾಗುವ ಕಾಮಗಾರಿ ರಾಘವೇಂದ್ರ ದೇವಸ್ಥಾನದ ಮುಂಭಾಗದಿಂದ ಹಾಯ್ದು ಕ್ಲಬ್ ರಸ್ಥೆಗೆ ಸೇರಿಕೊಳ್ಳಲಿದ್ದು ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಶಾಸಕ ಲಕ್ಷ್ಮಣ ಸವದಿ ಗುತ್ತಿಗೆದಾರರಿಗೆ ಸಲಹೆ ನೀಡಿದರು
ಇದೆ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸದಸ್ಯರಾದ ರಾಜಶೇಖರ ಗೂಡೊಡಗಿ, ವಿಲೀನರಾಜ್ ಯಳಮಲ್ಲೆ, ದತ್ತಾ ವಾಸ್ಟರ್, ಕಲ್ಲೇಶ್ ಮಡ್ಡಿ, ಮಲ್ಲೇಶ ಹುದ್ದಾರ, ಸಂತೋಷ ಸಾವಡಕರ, ಬೀರಪ್ಪಾ ಯಕ್ಕಂಚಿ, ಮಾಜಿ ಪುರಸಭೆ ಅಧ್ಯಕ್ಷ ದೀಲಿಪ ಲೋಣಾರೆ,
ಗುತ್ತಿಗೆದಾರ ಆನಂದಕುಮಾರ್ ಆರ್, ಇಸ್ಮಾಯಿಲ್ ಲಾಡಖಾನ, ರವಿ ಮರಡಿ, ಸಂಜು ಮಲಗಾನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು