203 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ತಂಡದ ಪರ ರಿಚಾ ಘೋಷ್ (64) ಹಾಗೂ ಪೆರಿ (57) ಅಬ್ಬರದ ಬ್ಯಾಟಿಂಗ್ ಗೆ ಗುಜರಾತ್ ಬೌಲರ್ ಗಳು ತತ್ತರಿಸಿದರು. ಆರ್ ಸಿಬಿ 6 ವಿಕೆಟ್ ಗಳೊಂದಿಗೆ ಮೊದಲ ಗೆಲುವು ದಾಖಲಿಸಿದೆ.
ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಗುಜರಾತ್ ತಂಡದ ಪರ ಆಶ್ಲೆ ಗಾರ್ಡ್ನರ್ ಅವರ ಸ್ಫೋಟಕ ಬ್ಯಾಟಿಂಗ್ (79 ರನ್) ಗಳ ನೆರವಿನಿಂದಾಗಿ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. 20 ಓವರ್ ಗಳಲ್ಲಿ ಗುಜರಾತ್ ತಂಡ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ಗುಜರಾತ್ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ಗೆಲುವು ಸಾಧಿಸಿತು.
ಆರ್ ಸಿ ಬಿ
ಆರಂಭಿಕ ಆಟಗಾರರಾದ ಸ್ಮೃತಿ ಮಂಧಾನ (9) ಡೇನಿಯಲ್ ವ್ಯಾಟ್ (4) ರನ್ ಗಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಎಲಿಸ್ ಪೆರಿ ಮತ್ತು ರಾಘವಿ 86 ರನ್ ಗಳ ಜೊತೆಯಾಟ ಆಡಿದ್ದು ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಬಳಿಕ ರಿಚಾ ಘೋಷ್ 27 ಎಸೆತಗಳಲ್ಲಿ 64 ರನ್ ಗಳಿಸಿದ್ದು ತಂಡದ ಗೆಲುವಿಗೆ ಕಾರಣವಾಯಿತು.