ಬೆಳಗಾವಿ: ಗೋವಾ ರಾಜ್ಯದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೂ ಮಾಮಲೇದಾರ್ (69) ಅವರ ಮೇಲೆ ಬೆಳಗಾವಿಯಲ್ಲಿ ಶನಿವಾರ ಮಧ್ಯಾಹ್ನ ಆಟೋ ಚಾಲಕ ಹಲ್ಲೆ ಮಾಡಿದ್ದು, ಕೆಲವೇ ನಿಮಿಷಗಳಲ್ಲಿ ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ.
ನಗರದ ಖಡೇಬಜಾರ್ ರಸ್ತೆಯಲ್ಲಿರುವ ಶ್ರೀನಿವಾಸ ಲಾಡ್ಜ್ ಮುಂದೆ ಘಟನೆ ನಡೆದಿದೆ. ಲಾವೊ ಅವರು ಮರಳಿ ಲಾಡ್ಜ್ ಒಳಗೆ ಹೋಗುವಾಗ ಕುಸಿದುಬಿದ್ದ
ಮೃತಪಟ್ಟರು. ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಘಟನೆ ವಿವರ:
ಲಾವೊ ಮಾಮಲೇದಾರ್ ಅವರು ತಮ್ಮ ಕೆಲಸದ ನಿಮಿತ್ತ ಬೆಳಗಾವಿಗೆ ಬಂದು, ಖಡೇಬಜಾರ್‌ನಲ್ಲಿರುವ ಶ್ರೀನಿವಾಸ ಲಾಡ್ಜ್‌ನಲ್ಲಿ ತಂಗಿದ್ದರು. ಮಧ್ಯಾಹ್ನ ಲಾಡ್ಜ್‌ಗೆ ಮರಳುವಾಗ ಅವರ ಕಾರು ಎದುರಿಗೆ ಇದ್ದ ಆಟೊಗೆ ಟಚ್ ಆಗಿತ್ತು. ಕೋಪಗೊಂಡ ಆಟೋ ಚಾಲಕ ಜಗಳ ಶುರು ಮಾಡಿದ. ಆಗ ಲಾವೊ ಅವರು ಆಟೋ ಚಾಲಕನ ನಡಯವೆ ಮಾತಿನ ಚಕಮಕಿ ಮುಂದುವರಿಸಿದರು.
ಸಿಟ್ಟಿಗೆದ್ದ ಆಟೊ ಚಾಲಕ ಲಾವೊ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಸುತ್ತ ಸೇರಿದ ಜನ ಜಗಳ ಬಿಡಿಸಿದರು. ಬಳಿಕ ಲಾವೊ ಅವರು ಲಾಡ್ಜ್ ಒಳಗೆ ಹೋಗಲು ಮೆಟ್ಟಿಲು ಹತ್ತಿದರು. ಕೌಂಟರ್ ಬಳಿಯೇ ಬಂದು ಕುಸಿದುಬಿದ್ದು ಅವರನ್ನು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಪ್ರಥಮ ಚಿಕಿತ್ಸೆ ಪರೀಕ್ಷೆ ಒಳಪಡಿಸಿದ ಆಸ್ಪತ್ರೆ ಸಿಬ್ಬಂದಿಗಳು ಅವರ ಪ್ರಾಣ ಬಿಟ್ಟಿದ್ದಾರೆ ಎಂದು ದೃಢಪಡಿಸಿದರು.
ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆ ಪೊಲೀಸರು ಲಾವೋ ಆರೋಪಿ ಆಟೋ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.