Sunday, January 12, 2025
Google search engine
Homeರಾಜ್ಯಗಟಾರ ಸ್ವಚ್ಛತೆಗೆ 200 ರೂ. ಕೇಳಿದ ಪಂಚಾಯತ್‌ – ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ ವೃದ್ಧ ದಂಪತಿ
- Advertisment -spot_img

ಗಟಾರ ಸ್ವಚ್ಛತೆಗೆ 200 ರೂ. ಕೇಳಿದ ಪಂಚಾಯತ್‌ – ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದಾರೆ ವೃದ್ಧ ದಂಪತಿ

ಬೆಳಗಾವಿ: ಗ್ರಾಮ ಪಂಚಾಯತ್‌ ಒಳಚರಂಡಿ ಸ್ವಚ್ಛಗೊಳಿಸದ್ದಕ್ಕೆ ವೃದ್ಧ ದಂಪತಿಯೇ ಗಟಾರಕ್ಕೆ ಇಳಿದು ಸ್ವಚ್ಛಗೊಳಿಸುವ ಮೂಲಕ ಸುದ್ದಿಯಾಗಿದ್ದಾರೆ.

ರಾಯಬಾಗ ತಾಲೂಕಿನ ಇಟನಾಳ ಗ್ರಾಮದಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ ಇದರ ಜೊತೆ ಕೆಟ್ಟ ಕೊಳೆತ ವಾಸನೆ ಬರುವುದು ಈಗ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮದ ಹಲವು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಗ್ರಾಮದಲ್ಲಿ ಹೆಚ್ಚಾದ ಸಾಂಕ್ರಾಮಿಕ ರೋಗಗಳ (Infectious Diseases) ಭೀತಿಯಿಂದ ಗ್ರಾಮಸ್ಥರು ಪಂಚಾಯತ್‌ಗೆ ಹಲವು ಬಾರಿ ಒಳಚರಂಡಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದರು. ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಪಿಡಿಓಗೆ ಮನವಿ ಮಾಡಿದರೂ ಕ್ಯಾರೇ ಅಂದಿಲ್ಲ. ಅಷ್ಟೇ ಅಲ್ಲದೇ ಗಟಾರಗಳ ಸ್ವಚ್ಚತೆಗಾಗಿ ಸಿಬ್ಬಂದಿಗೆ 200 ರೂ. ನೀಡಬೇಕೆಂದು ಹೇಳಿದ್ದಾರೆ.

ಇದರಿಂದ ಸಿಟ್ಟಾದ ಗ್ರಾಮದ ವೃದ್ಧ ದಂಪತಿ ಲಕ್ಷ್ಮಣ ಭಜಂತ್ರಿ ಹಾಗೂ ಮಹಾದೇವಿ ಅವರು ಟ್ಟಿ, ಸಣಿಕೆ ತೆಗೆದುಕೊಂಡು ಗಟಾರ ಸ್ವಚ್ಛಗೊಳಿಸುತ್ತಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!