ಖಾನಾಪುರ: 05/01/2025 ರಂದು ಸಾಯಂಕಾಲ ಸಮಯದಲ್ಲಿ ಗೊಲಿಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಹೀರೆ ಅಂಗ್ರೊಳ್ಳಿ ಗ್ರಾಮದ ಮಾಲ್ಕಿ ಸ ನಂ 95/3B ರಲ್ಲಿ ಮೃತ ಚಿರತೆಯ ಉಗುರುಗಳು, ಹಲ್ಲುಗಳು, ಚರ್ಮ, ಮೂಳೆಗಳು ಹಾಗೂ ಇತರೆ ಎಲ್ಲ ಅಂಗಾಂಗಗಳು ಸ್ವಾಭಾವಿಕ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮೇಲ್ನೋಟಕ್ಕೆ ಚಿರತೆಯ ವೈಸೋಸಹಜವಾಗಿ ಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿ ಪಶು ವೈದ್ಯರು ಪ್ರಾಥಮಿಕವಾಗಿ ಪರಿಶೀಲಿಸಿ ತಿಳಿಸಿದ್ದು ಚಿರತೆಯು ಗಂಡು ಚಿರತೆಯಾಗಿದ್ದು ಸುಮಾರು 12 ವರ್ಷ ವಯಸ್ಸು ಆಗಿರುತ್ತದೆ. ಅರಣ್ಯ ಕಾಯ್ದೆ ನಿಯಮಾನುಸಾರ ಪ್ರಸ್ತುತ ಚಾಲ್ತಿ ಇರುವ ಮಾರ್ಗಸೂಚಿಗಳ ಪ್ರಕಾರ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ಪಂಚ ಕಮಿಟಿ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಅರಣ್ಯ ಇಲಾಖೆ ದೇಹವನ್ನು ಸಿಬ್ಬಂದಿ ಸುಟ್ಟು ವಿಲೇವಾರಿ ಮಾಡಿದ್ದಾರೆ.