ಬೆಳಗಾವಿ: ಪುರುಷನ ಜೊತೆಗೆ ಪರಾರಿಯಾಗಿರುವ ಬೆರಕಿ ಪತಿಯೋರ್ವಳು ಚಿನ್ನ ,ಹಣ, ಕಾರು ಹಾಗೂ ಮಕ್ಕಳೊಂದಿಗೆ ಗೃಹ ಉಪಯೋಗಿ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ
ಪತ್ನಿ ಮನೆಯಲ್ಲಿ ದೋಚಿ ಹೋಗಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ ನೊಂದ ಪತಿ ಆಸಿಫ್ ಜನವರಿ 2ರಂದು ಬೆಳಗಾವಿ ಮಾರೀಹಾಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ .
ಮಾಸಾಬಿ (28) ಆಸಿಫ್ ಸೈಯದ್ ಪರಾರಿಯಾದ ಮಹಿಳೆ ಇದೇ ಗ್ರಾಮದ ಬಸವರಾಜ್ ಸೀತಿಮನಿ ಎಂಬಾತನ ಜೊತೆಗೆ ಪರಾರಿಯಾಗಿದ್ದಾಳೆ.
ಪರಾರಿಯಾಗುವ ವೇಳೆ ಮನೆಯಲ್ಲಿದ್ದ 60 ಗ್ರಾಂ ಚಿನ್ನ, 5 ಲಕ್ಷ ಹಣ ಹಾಗೂ ಕಾರ್ ಸಮೇತ ಪರಾರಿಯಾಗಿದ್ದಾಳೆ ಅಲ್ಲದೆ ಆಸಿಫ್ ಅವರ ಸಂಪಾದನೆಯಲ್ಲಿ ಬಾಳೆಕುಂದ್ರಿ ಹಾಗೂ ನಂದಗಡದಲ್ಲಿ ಎರಡು ಸೈಟ್ ಪತ್ನಿ ಮಾಸಾಬಿ ಹೆಸರಿನಲ್ಲಿ ಮಾಡಿದ್ದಾನೆ ಸೈಟ್ ದಾಖಲೆ ಕಾರು ಮನೆಯ ಸಿಲಿಂಡರ್ ಸೇರಿ ಎಲ್ಲಾ ವಸ್ತುಗಳ ಸಮೇತ ಪರಾರಿಯಾಗಿದ್ದಾಳೆ
ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ನಿವಾಸಿಯಾಗಿದ್ದ ಆಸಿಫ್ ಪತ್ನಿಯ ಮಾರಿಹಾಳ ಗ್ರಾಮಕ್ಕೆ ಬಂದು ನೆಲೆಸಿದ್ದ. ಪತ್ನಿಗಾಗಿ ಅಪ್ಪ ಅಮ್ಮನನ್ನು ದೂರ ಮಾಡಿ ಪತ್ನಿ ಜೊತೆ ಸಂಸಾರ ಮಾಡುತ್ತಿದ್ದ ಆಸಿಫ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ
ಆಸಿಪ್ ಪತ್ನಿ ಜೊತೆ ಬರಾರಿಯಾಗಿರುವ ಬಸವರಾಜ್ ಸಿತಿಮನಿ ಗೆ ಈ ಮೊದಲು ಮದುವೆಯಾಗಿ ಮಕ್ಕಳನ್ನು ಹೊಂದಿದ್ದಾನೆ ಬಸವರಾಜು ಜೊತೆಗೆ ಕಾರಿನಲ್ಲಿ ಮಾಸಾಬಿ ಹಾಗೂ ಎರಡು ಮಕ್ಕಳು ಪರಾರಿಯಾಗಿದ್ದಾರೆ ಎನ್ನಲಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮ್ಮನ ಪತ್ನಿ ಹಾಗೂ ಮಕ್ಕಳನ್ನು ಹುಡುಕಿ ಕೊಡಿ ಎಂದು ಆಸಿಫ್ ಸೋದರ ಕೇಳಿಕೊಂಡಿದ್ದಾರೆ
ಒಟ್ಟಿನಲ್ಲಿ ಡ್ರೈವರ್ ವೃತ್ತಿಯಲ್ಲಿ ಇರೋ ಆಸಿಫ್ ದುಡ್ಡಿನ ಸಂಪಾದನೆ ಎಲ್ಲವನ್ನು ಕಬಳಿಸಿ ಪುರುಷನ ಜೊತೆಗೆ ಓಡಿ ಹೋಗಿದ್ದು ಕಿಡ್ನಾಪ್ ಪ್ರಕರಣ ದಾಖಲಿಸಲು ಆಸಿಫ್ ಮುಂದಾಗಿದ್ದಾರೆ.