ಬೆಳಗಾವಿ: ಜಮ್ಮು ಮತ್ತು ಕಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮೂರು ನೂರು (300) ಅಡಿ ಆಳದ ಕಂದಕಕ್ಕೆ ಸೇನಾ ವಾಹನ ಬಿದ್ದು ಬೆಳಗಾವಿ ಮೂಲದ ಇಬ್ಬರು ಯೋಧರು ಸೇರಿದಂತೆ ಐವರು ಹುತಾತ್ಮರಾಗಿದ್ದಾರೆ.
ಬೆಳಗಾವಿ ಸಾಂಬ್ರದ ದಯಾನಂದ ತಿರಕ್ಕನವರ ಹಾಗು ಚಿಕ್ಕೋಡಿ ತಾಲ್ಲೂಕಿನ ಕುಪ್ಪನವಾಡಿ ನಿವಾಸಿ ಧರ್ಮರಾಜ ಸುಭಾಷ ಮೃತರಾಗಿದ್ದಾರೆ.ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚನಲ್ಲಿ ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿತ್ತು. ಘರೋವ ಪ್ರದೇಶದಲ್ಲಿ ಸಂಜೆ 5:20 ರ ಸುಮಾರಿಗೆ ಆರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ವಾಹನವು ಜಿಲ್ಲೆಯ ಬ್ಯಾನೋಯ್ ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.