Tuesday, April 29, 2025
Google search engine
Homeಅಂಕಣಗಡಿಯಲ್ಲಿ ಎಂಇಎಸ್ ಪುಂಡಾಟ !
spot_img

ಗಡಿಯಲ್ಲಿ ಎಂಇಎಸ್ ಪುಂಡಾಟ !

 

ಬೆಳಗಾವಿ :ಚಳಿಗಾಲ ಅಧಿವೇಶನ ಸಂದರ್ಭದಲ್ಲಿ “ಮಹಾಮೇಳಾವ್” ಹೆಸರಿನಲ್ಲಿ ಎಂಇಎಸ್ ( ಮಹಾರಾಷ್ಟ್ರ ಏಕೀಕರಣ ಸಮಿತಿ ) ಪುಂಡಾಟ ಮೆರೆಯಲು ಸಿದ್ಧತೆ ನಡೆಸಿದೆ. ಕಳೆದ ವರ್ಷದಿಂದ ಮಹಾಮೇಳಾವ್ ಗೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಈ ಬಾರಿಯೂ ಮೇಳಾವ್ ಗೆ ಅನುಮತಿ ನಿರಾಕರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು, ನಾವು ಮಹಾಮೇಳಾವ್ ಮಾಡುತ್ತೇವೆ ಎಂದು ಎಂಇಎಸ್ ಸವಾಲು ಎಸೆದಿದೆ.

ಒಂದುವೇಳೆ ಬೆಳಗಾವಿಯಲ್ಲಿ‌ ಮಹಾಮೇಳಾವ್ ನಡೆಸಲು ಅವಕಾಶ ನೀಡದಿದ್ದರೆ ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಕರ್ನಾಟಕದಿಂದ ಬರುವ ವಾಹನಗಳನ್ನು ಮಹಾರಾಷ್ಟ್ರ ಪ್ರವೇಶಿಸದಂತೆ ತಡೆಯುತ್ತೇವೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣ ಕೊಲ್ಹಾಪುರ ಜಿಲ್ಲಾಧಿಕಾರಿ ಸಂಜಯ್ ಶಿಂಧೆ ಅವರಿಗೆ ಮನವಿ ಸಲ್ಲಿಸಿದೆ. ಇನ್ನೂ ರಾಜ್ಯದ‌ ಪೊಲೀಸರ ಮಹಾರಾಷ್ಟ್ರ ಗಡಿಯಿಂದ ರಾಜ್ಯಕ್ಕೆ ಪ್ರತಿಭಟನಾಕಾರರು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.

 

RELATED ARTICLES
- Advertisment -spot_img

Most Popular

error: Content is protected !!