ದೇಶದ ಅತ್ಯುತ್ತಮ ಉದಯೋನ್ಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಬಿಮ್ಸ್ ಸಾಧನೆ..
ರಾಷ್ಟ್ರೀಯ ಮಟ್ಟದಲ್ಲಿ ಏಳನೇ ಸ್ಥಾನ ಪಡೆದು ಬೀಗಿದ ಬೆಳಗಾವಿಯ ಬಿಮ್ಸ್..
ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್), ವೈದ್ಯಕೀಯ ರಂಗದಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ್ದು, ಇಡೀ ರಾಜ್ಯವೇ ಹೆಮ್ಮೆ ಪಡುವ ಸಂತಸದ ವಿಷಯವಾಗಿದೆ..
ಬೆಳಗಾವಿಯ ಬಿಮ್ಸ್ ಕಾಲೇಜಿನ ಈ ಸಾಧನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಸಿಬ್ಬಂದಿ, ಇದು ದೇಶದ ಅತ್ಯುತ್ತಮ ಉದಯೋನ್ಮುಖ ವರ್ಗಗಳಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದೆ ಹಾಗೂ 2000ರ ನಂತರ ಸ್ಥಾಪಿಸಲಾದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಬಿಮ್ಸ್ ಕಾಲೇಜು 9ನೇ ರ್ಯಾಂಕ್ ಪಡೆದುಕೊಂಡಿದೆ..
ಅದೇ ರೀತಿ ಇಂಡಿಯಾ ಟುಡೆ ಸಮೀಕ್ಷೆ 2024ರ ಪ್ರಕಾರ ಭಾರತದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 33 ನೇ ಸ್ಥಾನ ದೊರಕಿದ್ದು ಗೌರವದ ಸಂಗತಿ ಎಂಬ ಮಾಹಿತಿ ನೀಡಿದ್ದಾರೆ.
ಬಿಮ್ಸ್ ಬೆಳಗಾವಿಯ ಈ ಸಾಧನೆಯ ಸಂಭ್ರಮಕ್ಕಾಗಿ ಸಂಸ್ಥೆಯ ಅಧಿಕಾರಿಗಳಿಗೆ, ಪ್ರಾಧ್ಯಾಪಕರಿಗೆ, ಇತರೆ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿರ್ದೇಶಕರಾದ ಡಾ ಅಶೋಕಕುಮಾರ ಶೆಟ್ಟಿ ಅವರು ಅಭಿನಂದನೆಯನ್ನು ತಿಳಿಸಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..