ಬೆಳಗಾವಿ-ಮಲತಾಯಿಯ ಕೃತ್ಯಕ್ಕೆ ಬಲಿಯಾಯ್ತಾ ಮೂರು ವರ್ಷದ ಕಂದಮ್ಮ? ಹೌದು ಇಂತಹ ಘಟನೆ ನಡೆದಿರುವದು ಬೆಳಗಾವಿಯಲ್ಲಿ,ಮಲತಾಯಿಯಿಂದ ಮೂರು ವರ್ಷದ ಕಂದಮ್ಮನ ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಬೆಳಗಾವಿಯ ಕಂಗ್ರಾಳಿ ಕೆ.ಹೆಚ್ ಗ್ರಾಮದಲ್ಲಿ ವಾಸವಿದ್ದ ಕುಟುಂಬ.ಮಲತಾಯಿ ಸಪ್ನಾ ನಾವಿ ಮೂರು ವರ್ಷದ ಸಮೃದ್ಧಿ(3) ಕೊಲೆ ಮಾಡಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.ಇಂದು ಬೆಳಗ್ಗೆ ಬಾಲಕಿಯ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿರುವ ಆರೋಪ ಮಾಡಲಾಗಿದೆ.
ಬಾಲಕಿ ಸಮೃದ್ದಿ ಅಜ್ಜಿ ಹಾಗೂ ಚಿಕ್ಕಪ್ಪನಿಂದ ಸಪ್ನಾ ಮೇಲೆ ಕೊಲೆ ಆರೋಪ ಮಾಡಲಾಗಿದೆ.ಮೊದಲ ಪತ್ನಿ ನಿಧನದಿಂದ ಎರಡನೇ ಮದುವೆಯಾಗಿದ್ದ ರಾಯಣ್ಣ ನಾವಿ ಅವರು
ಸಿ ಆರ್ ಪಿ ಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊದಲ ಪತ್ನಿ ಭಾರತಿ ನಾವಿ ಕೊಲೆ ಆರೋಪ ಎದುರಿಸ್ತಿರೋ ಗಂಡನ ವಿರುದ್ದ ರಾಯಣ್ಣ ಕುಟುಂಬ.
ಪತಿ ರಾಯಣ್ಣ, ತಾಯಿ ಶೋಭಾ, ತಂಗಿ ರೂಪಾ ವಿರುದ್ಧ 2021 ರಲ್ಲಿ ದೂರು ದಾಖಲಿಸಿದ್ದರು.
ನಾಗಪುರದ ಕಾರದಾ ಠಾಣೆಯಲ್ಲಿ ದಾಖಲಾಗಿದ್ದ ದೂರು.
ಆ ಪ್ರಕಣದಲ್ಲೂ ಆರೋಪಿಯಾಗಿದ್ದ ರಾಯಣ್ಣ ನಾವಿ ಕುಟುಂಬ.ಅಂದು ತಾಯಿ ಕೊಂದು ಇಂದು ಆಕೆಯ ಮಗಳು ಸಮೃದ್ಧಿಯನ್ನೂ ಕೊಂದ ಆರೋಪ ಕೇಳಿ ಬಂದಿದೆ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣ