ಬೆಳಗಾವಿ: ಇದು ರಾಜ್ಯದ ಚುನಾವಣೆ ಅಲ್ಲ, ದೇಶದ ಚುನಾವಣೆ ಆಗಿದೆ. ದೇಶದ ರಕ್ಷಣೆಗೆ ಮತ ನೀಡಬೇಕು. ಸನಾತನ ಧರ್ಮದ ಉಳಿವಿಗೆ ಮತ ನೀಡಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು. ಅದಕ್ಕಾಗಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದು ರಾಮದುರ್ಗ ಬಿಜೆಪಿ ಮುಖಂಡ ಚಿಕ್ಕರೇವಣ್ಣ ಅವರು ಕರೆ ನೀಡಿದ್ದಾರೆ.
ಶನಿವಾರ ರಾತ್ರಿ ಲೋಕಸಭಾ ಚುನಾವಣೆ ಅಂಗವಾಗಿ ರಾಮದುರ್ಗ ಪಟ್ಟಣದಲ್ಲಿ ಭಹಿರಂಗ ಸಭೆ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು. ಮೋದಿಯವರು 400 ಸೀಟುಗಳ ಅಂತರದಿಂದ ಗೆಲ್ಲಿಸಿ ಮೂರನೆ ಬಾರಿಗೆ ಪ್ರಧಾನಿ ಮಂತ್ರಿ ಮಾಡಬೇಕು. ಗುಜರಾತದ ಸುರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅವಿರೋಧವಾಗಿ ಅಯ್ಕೆ ಆಗಿದ್ದಾರೆ. ನಮ್ಮ ಸಂಕಲ್ಪ ಪೂರ್ಣ ಆಗಲು ಕೇವಲ 399 ಸೀಟು ಗೆಲ್ಲಿಸಬೇಕು. ನನಗೆ ಬಿಜೆಪಿ ಪಕ್ಷದಲ್ಲಿ ಕೇವಲ 8 ದಿನಗಳ ಅಂತರದಲ್ಲಿ ವಿಧಾನ ಸಭೆ ಟಿಕೆಟ್ ನೀಡಿ 70 ಸಾವಿರ ಮತಗಳು ನೀಡಿದ್ದು ನಿಮ್ಮಲ್ಲರ ಅಭಿಮಾನ ಎಂದು ಹೇಳಿದರು
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ನಾನು ಜಿಲ್ಲೆಯಾದ್ಯಂತ ಪ್ರಚಾರ ಮಾಡಿದ್ದೇನೆ. ಹೊದಲೆಲ್ಲ ಜನ ಬೆಂಬಲ ಗೆಚ್ಚಾಗುತ್ತಲೇ ಇದೆ. ನಾವೆಲ್ಲರೂ ಕೂಡಿ ನರೇಂದ್ರ ಮೋದಿಯವರನ್ನು ಶಕ್ತಿ ಕೊಡುವ ಕೆಲಸ ಮಾಡಬೇಕು. ಈ ಕೆಲಸವನ್ನು ರಾಮದುರ್ಗದ ಸಮಸ್ತ ಜನ ಮಾಡಬೇಕು ಎಂದು ಕರೆ ನೀಡಿದರು.
ನರೇಂದ್ರ ಮೋದಿಯವರು ಭಾರತದ ನಾಯಕ ಅಷ್ಟೇ ಅಲ್ಲ, ಅವರು ವಿಶ್ವ ನಾಯಕ. ಮಹಿಳೆಯರಿಗೆ ಉಜ್ವಲ ಯೋಜನೆ ಮೂಲಕ ಪ್ರತಿ ಮನೆ ಮನೆಗೆ ಗ್ಯಾಸ್ ವಿತರಿಸುವ ಕೆಲಸ ಮಾಡಿದ್ದಾರೆ. ಜನಧನ್ ಖಾತೆ ತೆರೆಸುವ ಮೂಲಕ ಬಡವರಿಗೆ ಅನುಕೂಲ ಆಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 6 ಸಾವಿರ ಹಾಕಲಾಗುತ್ತಿದೆ. ಜನ ಔಷಧಿ ಕೇಂದ್ರದ ಮೂಲಕ ಕಡಿಮೆ ಬೆಲೆಯಲ್ಲಿ ಔಷಧಿ ನೀಡಲಾಗುತ್ತಿದೆ. ಹೀಗೆ ಮೋದಿಯವರು ಕೈಗೊಂಡಿರುವ ಹತ್ತು ಹಲವಾರು ಯೋಜನೆಗಳು ಯಶಸ್ವಿಯಾಗಿವೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಜನ ಕಾಂಗ್ರೆಸ್ ಅಂತಹ ಮೋಸಗಾರಿಗೆ ಒಪ್ಪುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ, ಪ್ರಮುಖರಾದ ಡಾ. ಕೆ.ವಿ.ಪಾಟೀಲ್, ಅಪೇಶಿಗೌಡ ಪಾಟೀಲ, ದ್ಯಾವಪ್ಪ ಬೆಳವಡಿ, ಬಿ.ಎಸ್. ಬೆಳವಣ್ಣಕ್ಕೆ, ಮಾದಮ್ಮನವರ, ರೇಣುಕೆ, ಶಂಕರ ಬೆನ್ನೂರ, ನಿಂಗಪ್ಪ ಮಳಿಕೇರಿ, ಈರಣ್ಣ ಹರನಟ್ಟಿ, ಉಮೇಶ ಕೊಳವಿ ಸೇರಿದಂತೆ ಪಟ್ಟಣದ ಗುರುಹಿರಿಯರು, ಮಾತೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು