Monday, December 23, 2024
Google search engine
Homeಅಂಕಣಅಭಿವೃದ್ಧಿಯೂ ಇಲ್ಲಾ, ಸ್ವಚ್ಛ ಭಾರತವೂ ಇಲ್ಲಾ.. ಡಾ. ತೇಜಸ್ವಿನಿ ಗೌಡ..

ಅಭಿವೃದ್ಧಿಯೂ ಇಲ್ಲಾ, ಸ್ವಚ್ಛ ಭಾರತವೂ ಇಲ್ಲಾ.. ಡಾ. ತೇಜಸ್ವಿನಿ ಗೌಡ..

ಅಭಿವೃದ್ಧಿಯೂ ಇಲ್ಲಾ, ಸ್ವಚ್ಛ ಭಾರತವೂ ಇಲ್ಲಾ.. ಡಾ. ತೇಜಸ್ವಿನಿ ಗೌಡ..

ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ..

ಚಿಕ್ಕೋಡಿ: ಪ್ರಧಾನಿ ಮೋದಿಯವರ ಸ್ವಚ್ಚ ಭಾರತ ಎಲ್ಲಿಯೂ ಕಾಣುತ್ತಿಲ್ಲ. ಕಂಡ ಕಂಡಲ್ಲಿ ಕಸ ಮಾತ್ರ ಕಾಣುತ್ತಿದೆ. ಇನ್ನು ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಹಾಲಿ ಬಿಜೆಪಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಅವರ ಕೊಡುಗೆ ಏನೆಂದು ನೀವೆಲ್ಲರೂ ಪ್ರಶ್ನಿಸಬೇಕೆಂದು ಮಾಜಿ ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಪಕ್ಷದ ವಕ್ತಾರೆ ಡಾ. ತೇಜಸ್ವಿನಿ ಗೌಡ ತಿಳಿಸಿದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದ ನಾಗರಮುನ್ನೊಳ್ಳಿಯಲ್ಲಿ ಸಾರ್ವಜನಿಕ ಸಭೆ, ಕರೋಶಿ ಗ್ರಾಮದಲ್ಲಿ ರೋಡ್ ಶೋ ನಡೆಸಿ, ಮತಯಾಚಿಸಿದ ನಂತರ ನಡೆದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ  ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆಗಳಲ್ಲಿ, ಗ್ರಾಮಗಳಲ್ಲಿ ಕಂಡ ಕಂಡಲ್ಲಿ ಕಸ ಮಾತ್ರ ಕಾಣುತ್ತಿಲ್ಲ. ಈ ಬಿಜೆಪಿಯವರು ಜನರ ಮನಸಲ್ಲಿಯೂ ಕಸ ತುಂಬಿದ್ದಾರೆ. ಇದು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ನಾಡು, ಈ ನಾಡಲ್ಲಿ ಜನರ ಮನಸಲ್ಲಿ ಕಸ ತುಂಬಲು ನಾವು ಬಿಡೋದಿಲ್ಲ ಎಂದರು.

ಬಿಜೆಪಿಯವರಂತೆ ಅಧರ್ಮದ ರಾಜಕೀಯವನ್ನು ಕಾಂಗ್ರೆಸ್‌ ಪಕ್ಷ ಯಾವತ್ತು ಮಾಡೋದಿಲ್ಲ. ನಾವು ಲೋಕಸಭೆ ಚುನಾವಣೆ ಇಷ್ಟೊಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದು ಕರ್ನಾಟಕದ ಮಾಡೆಲ್‌ ಅನ್ನು ದೇಶದಲ್ಲಿ ತರುವುದಕ್ಕಾಗಿ, ಅದಕ್ಕಾಗಿ ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಬಡವರಿಗೆ ಚಿನ್ನ ಕೊಟ್ಟರೆ ತಿನ್ನಲು ಆಗಲ್ಲ. ಅನ್ನ ಕೊಟ್ಟರೆ ತಿನ್ನುತ್ತಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯನವರು ನಿಮಗೆಲ್ಲ 10 ಕೆಜಿ ಅಕ್ಕಿ ನೀಡುವ ಮೂಲಕ ಅನ್ನರಾಮಯ್ಯ ಅನಿಸಿಕೊಂಡಿದ್ದಾರೆ. ಕುರುಬ ಸಮಾಜವನ್ನು ಬೆಳೆಸಲು ಬಿಜೆಪಿಯವರಿಗೆ ಇಷ್ಟವಿಲ್ಲ. ಅದಕ್ಕಾಗಿಯೇ ಈಶ್ವಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ದ್ವೇಷ ಸಾಧಿಸುತ್ತಿರುವ ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್‌ ಪಕ್ಷವೇ, ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಗ್ಯಾರಂಟಿ ಯೋಜನೆ ಕೊಟ್ಟಾಗ ಬಿಜೆಪಿಯವರಿಗೆ ಹೊಟ್ಟೆ ಉರಿತು. ಶ್ರೀಮಂತರ ಭೂಮಿಯನ್ನು ಬಡವರಿಗೆ ಹಂಚಿದ್ದು ಕೂಡ ಕಾಂಗ್ರೆಸ್ ಪಕ್ಷವೇ ಎಂದು ತಿಳಿಸಿದರು.

ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ಶ್ರೀ ಸಿದ್ದೇಶ್ವರ, ಬಸವೇಶ್ವರರ ಪಾದಕ್ಕೆ ನಮಿಸುತ್ತೇನೆ. ಮೇ 07 ರಂದು ನಡೆಯುವ ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡಿ ಬಹು ಅಂತರದಿಂದ ಗೆಲ್ಲಿಸುವ ಮೂಲಕ ಆಶೀರ್ವದಿಸಿ ಎಂದು ಮನವಿ ಮಾಡಿದರು.

ತಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ, ಭಾರತ ದೇಶದ ಪ್ರಗತಿಗಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಚಿಕ್ಕೋಡಿ ಲೋಕಸಭೆಯಿಂದ ಒಂದೇ ಒಂದು ಬಾರಿ ನನಗೆ ಅವಕಾಶ ನೀಡಿ. ನಿಮ್ಮ ಸೇವೆಗೆ ಹಗಲಿರುಳು ಶ್ರಮಿಸುತ್ತೇನೆ. ತಂದೆ, ಸಚಿವ ಸತೀಶ್‌ ಜಾರಕಿಹೊಳಿ ಅವರ ಸಲಹೆ, ಸೂಚನೆ ಮೇರೆಗೆ ನಿಮ್ಮ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇನೆ ಎಂದರು.

ಕುರುಬ ಸಮಾಜದ ಹಿರಿಯ ಮುಖಂಡ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಜಾರಕಿಹೊಳಿ ಸಹೋದರರು ಎಲ್ಲಾ ಸಮಾಜಗಳನ್ನು ಗೌರವಿಸುತ್ತಾರೆ. ಜಾರಕಿಹೊಳಿ ಮನೆತನಕ್ಕೆ ಯಾವುದೇ ಜಾತಿ ಇಲ್ಲ. ಇವತ್ತು ಅದೇ ಮನೆತನದ ಕುಡಿ ಪ್ರಿಯಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರನ್ನು ಬಹು ಅಂತರದಿಂದ ಗೆಲ್ಲಿಸಬೇಕೆಂದು ಕೋರಿದರು.

ಇದೇ ವೇಳೆ ನಾಗರಮುನ್ನೊಳ್ಳಿ ಹಾಗೂ ಕರೋಶಿ ಗ್ರಾಮಗಳ ಹಲವು ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಕರೋಶಿ ಗ್ರಾಮದಲ್ಲಿ ರೋಡ್ ಶೋ: ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಕರೋಶಿ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೋಹಿತೆ, ಅರ್ಜುನ ನಾಯಕವಾಡಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ನಿರ್ಮಲಾ ಪಾಟೀಲ್, ಸಿದ್ದಪ್ಪ ಮರಾಯ, ರಾಜೇಂದ್ರ ಸಣ್ಣಕ್ಕಿ, ಲಕ್ಷ್ಮಣ ಮಸಗುಪ್ಪಿ, ಮುನೀರ ಕಾಟಿಪಳ್ಯ, ವಿನಾಯಕ ಕುಂಬಾರ, ಸಂಗೀತಾ ಮಾದರ, ರಾಜ್ಮಾ ಮುಸ್ಕಾನಿ, ಲಕ್ಷ್ಮಿ ಮರ್ಯಾಯಿ ಸೇರಿದಂತೆ ಸೇರಿದಂತೆ, ನಾಗರಮುನ್ನೊಳ್ಳಿ , ಕರೋಶಿ ಗ್ರಾಮದ ಹಿರಿಯರು,‌ ಕಾರ್ಯಕರ್ತರು, ಮುಖಂಡರು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.

ವರದಿ ಪ್ರಕಾಶ ಕುರಗುಂದ..

RELATED ARTICLES
- Advertisment -spot_img

Most Popular

error: Content is protected !!