ಈ ಚುನಾವಣೆ ಸಂವಿಧಾನ ಹಾಗೂ ದೇಶದ ರಕ್ಷಣೆ ಗೆ ಮಹತ್ವದ್ದು – ಜಮೀರ್ ಅಹಮದ್ ಖಾನ್
ಗೋಕಾಕ್ : ದೇಶ ಹಾಗೂ ಸಂವಿಧಾನ ರಕ್ಷಣೆ ಗಾಗಿ ಈ ಬಾರಿಯ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಗೋಕಾಕ್ ನಲ್ಲಿ ಅಲ್ಪಸಂಖ್ಯಾತರ ಮುಖಂಡರು ಹಾಗೂ ಮುತವಲ್ಲಿ ಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಹಾಗೂ ಸಂವಿಧಾನ ಕ್ಕೆ ಅಪಾಯ ಬಂದೊದಗಿದೆ. ಹೀಗಾಗಿ ಕೋಮುವಾದಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಮೈತ್ರಿಕೂಟ ಕ್ಕೆ ಬಲ ತುಂಬಬೇಕಾಗಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಅಲ್ಪಸಂಖ್ಯಾತ ಸಮುದಾಯ ಒಟ್ಟಾಗಿ ಮತ ಹಾಕಿ ಗೆಲ್ಲಿಸಬೇಕು. ಮುಸ್ಲಿಂ ಸಮುದಾಯದ ಮತದಾನ ಪ್ರಮಾಣ ವೂ ಈ ಬಾರಿ ಹೆಚ್ಚಾಗುವಂತೆ ನೋಡೀಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದು, ಈ ಬಾರಿಯ ಚುನಾವಣೆ ಯಲ್ಲಿ ಕೇಂದ್ರದಲ್ಲಿ ಕಾಂಗ್ರೇಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆ ಯರಿಗೆ ವರ್ಷ ಕ್ಕೆ ಒಂದು ಲಕ್ಷ ರೂ., ಯುವಕರಿಗೆ ಒಂದು ಲಕ್ಷ ರೂ. ನೀಡುವ ಭರವಸೆ ನೀಡ ಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಬದ್ಧತೆ ಹಾಗೂ ಬಡವರ ಪರ ಕಾಳಜಿಗೆ ಸಾಕ್ಷಿ ಎಂದು ತಿಳಿಸಿದರು.
ಕೇಂದ್ರದಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ನರೇಂದ್ರ ಮೋದಿ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೆ ದ್ವೇಷ ಭಾವನೆ ಕೆರಳಿಸಿ ಮತ ಕೇಳುತ್ತಿದ್ದಾರೆ. ಹಿಂದೂ ಮುಸ್ಲಿಂ ಬಿಟ್ಟರೆ ಇವರಿಗೆ ಬೇರೆ ಏನೂ ಬೇಕಿಲ್ಲ. ಕರ್ನಾಟಕ ಕ್ಕೆ ಅತಿ ಹೆಚ್ಚು ಅನ್ಯಾಯ ಬಿಜೆಪಿ ಸರ್ಕಾರ ದಿಂದ ಆಗಿದೆ. ಇವರು ನಮಗೆ ಕೊಟ್ಟಿದ್ದು ಚೊಂಬು ಮಾತ್ರ ಎಂದು ಆರೋಪಿಸಿದರು.
ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮುಖಂಡರಾದ ಅಶೋಕ್ ಪೂಜಾರಿ, ಸಿರಾಜ್, ಮನ್ಸೂರ್, ಸಮೀರ್, ಶಾಕಿಬ್ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆ
ಅರಬಾವಿ ಕ್ಷೇತ್ರದ ಮೂಡಲಗಿ ಯಲ್ಲೂ ಸಚಿವ ಜಮೀರ್ ಅಹಮದ್ ಖಾನ್ ಅಲ್ಪಸಂಖ್ಯಾತರ ಸಮಾವೇಶ ದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕರ್ತರು ಅಭಿಮಾನಿ ಗಳು ಎರಡು ಕಿಮಿ ವರೆಗೆ ಪಟ್ಟಣ ದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ಮುಖಂಡ ಅರವಿಂದ ದಳವಾಯಿ ಸೇರಿ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಕುರಗುಂದ.