Tuesday, April 29, 2025
Google search engine
Homeಸುದ್ದಿತರಕಾರಿ ಮಾರುಕಟ್ಟೆಯಲ್ಲಿ ಚಾಯ್ ಪೆ ಚರ್ಚಾ ಮ‌ೂಲಕ ಮತ ಯಾಚನೆ ಮಾಡಿದ ಜಗದೀಶ್ ಶೆಟ್ಟರ್
spot_img

ತರಕಾರಿ ಮಾರುಕಟ್ಟೆಯಲ್ಲಿ ಚಾಯ್ ಪೆ ಚರ್ಚಾ ಮ‌ೂಲಕ ಮತ ಯಾಚನೆ ಮಾಡಿದ ಜಗದೀಶ್ ಶೆಟ್ಟರ್

ತರಕಾರಿ ಮಾರುಕಟ್ಟೆಯಲ್ಲಿ ಚಾಯ್ ಪೆ ಚರ್ಚಾ ಮ‌ೂಲಕ ಮತ ಯಾಚನೆ ಮಾಡಿದ ಜಗದೀಶ್ ಶೆಟ್ಟರ್

ಬೆಳಗಾವಿ: ಚುನಾವಣೆಗೆ ಕೆಲವು ದಿನಗಳು ಬಾಕಿ ಉಳಿದಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ‌ಗದೀಶ್ ಶೆಟ್ಟರ್ ಅವರಿಗೆ ಹೊದಲೆಲ್ಲ ಜನ ಆತ್ಮಿಯವಾಗಿ ಸ್ವಾಗತಿಸಿ ಬೆಂಬಲ ನೀಡುತ್ತಿದ್ದಾರೆ. ಇಂದು ಬೆಳ್ಳಂ ಬೆಳಗ್ಗೆ ಪ್ರಚಾರ ಆರಂಭಿಸಿದ ಜಗದೀಶ್ ಶೆಟ್ಟರ್ ಅವರಿಗೆ ಜನರು ಬೆಂಬಲ ನೀಡಿದ್ದಾರೆ‌‌.

ಪ್ರತಿ ನಿತ್ಯ ಜಗದೀಶ್ ಶೆಟ್ಟರ್ ಅವರು ಚಾಯ್ ಪೆ ಚರ್ಚಾ ಕಾರ್ಯಕ್ರಮದ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ
ಗಾಂಧಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ಚಾಯ್ ಪೇ ಚರ್ಚಾ ಕಾರ್ಯಕ್ರಮದ ಮೂಲಕ ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದ್ದಾರೆ.

ಮತಯಾಚನೆ ಮಾಡುವ ಮೂಲಕ ಜಗದೀಶ್ ಶೆಟ್ಟರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬೀದಿ ಬದಿಯ ವ್ಯಾಪಾರಿಗಳಿಗೆ ಜಾರಿಗೆ ತಂದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಹಾಗಾಗಿ ದೇಶವನ್ನು ಹೆಚ್ಚು ಹೆಚ್ಚು ಅಭಿವೃದ್ಧಿ ಪಡಿಸಲು ಬಿಜೆಪಿಗೆ ಮತ ನೀಡಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾದ್ಯಕ್ಷ ಅನಿಲ ಬೆನಕೆ, ಜೈ ಕಿಸಾನ್ ವೆಜಿಟೆಬಲ್ ಮಾರ್ಕೆಟ್ ಅಧ್ಯಕ್ಷರಾದ ದೀವಾಕರ ಪಾಟೀಲ್, ಉಪಾಧ್ಯಕ್ಷರಾದ ಮೋಹನ ಮನ್ನೋಳಕರ, ಕಾರ್ಯದರ್ಶಿ ಎ‌.ಕೆ. ಬಗವಾನ್, ಪ್ರಮುಖರಾದ ಡಾ. ರವಿ ಪಾಟೀಲ್, ವಿಶ್ವನಾಥ ಪಾಟೀಲ್, ಎಂ.ಎಂ. ದೋಣಿ, ಉಮೇಶ ಪಾಟೀಲ, ಕುಲದೀಪ್ ತಹಶೀಲ್ದಾರ, ಪಿ.ಬಿ. ಬಾಬಣ್ಣವರ, ಲಕ್ಷ್ಮಣ ಅಂಬೋಜಿ ಸೇರಿದಂತೆ ವ್ಯಾಪಾರಸ್ಥರು, ರೈತರು, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಕುರಗುಂದ.

RELATED ARTICLES
- Advertisment -spot_img

Most Popular

error: Content is protected !!