Tuesday, December 24, 2024
Google search engine
Homeಸುದ್ದಿವಿದ್ಯಾರ್ಥಿಗಳು SSLC ಪರೀಕ್ಷೆಯನ್ನು  ಎದೆಗುಂದದೆ ಆತ್ಮಸ್ಥೆರ್ಯದಿಂದ ಎದುರಿಸಿ  : ಜಿಪಂ ಸಿಇಒ ರಾಹುಲ್ ಶಿಂಧೆ

ವಿದ್ಯಾರ್ಥಿಗಳು SSLC ಪರೀಕ್ಷೆಯನ್ನು  ಎದೆಗುಂದದೆ ಆತ್ಮಸ್ಥೆರ್ಯದಿಂದ ಎದುರಿಸಿ  : ಜಿಪಂ ಸಿಇಒ ರಾಹುಲ್ ಶಿಂಧೆ

ಬೆಳಗಾವಿ : 2024 ಸಾಲಿನ ಎಸ್.ಎಸ್.ಎಲ್.ಸಿ.ವಾ ರ್ಷಿಕ ಪರೀಕ್ಷೆಗಳು ದಿನಾಂಕ:25.03.2024 ರಿಂದ 06.04.2024 ರವರೆಗೆ ಬೆಳಗಾವಿ ಜಿಲ್ಲೆ ಬೆಳಗಾವಿ  ದಕ್ಷಿಣ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಜರುಗಲಿವೆ.

ವರ್ಷ ಪೂರ್ತಿ ಶ್ರಮ ವಹಿಸಿ ಅಧ್ಯಯನ ಮಾಡಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುತ್ತಿರುವ
ಜಿಲ್ಲೆಯ ಎಲ್ಲ ನನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು.

ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ವಿದ್ಯಾರ್ಥಿಗಳು ನಿರಾತಂಕವಾಗಿ ಎದೆಗುಂದದೆ ಆತ್ಮಸ್ಥೆರ್ಯದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ
ಪಡೆದು ತಮ್ಮ ತಂದೆ ತಾಯಂದಿರ ಕೀರ್ತಿಗೆ ಪಾತ್ರರಾಗಿರೆಂದು ಹಾರೈಸುವೆ.

ಈ ಪರೀಕ್ಷೆಯು ತಮ್ಮ ಸಾಮರ್ಥ್ಯವನ್ನು ಅಭಿವ್ಯಕ್ತಿಸಲು ಇದೊಂದು ಒಳ್ಳೆಯ ಅವಕಾಶವಾಗಿದ್ದು ಇದರಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಾವೆಲ್ಲರೂ ಪರೀಕ್ಷೆಗಳನ್ನು ಯಶಸ್ವಿಗೊಳಿಸಲು ಕೋರುತ್ತೇನೆ.

ತಾವೆಲ್ಲರೂ ಯಾವುದೇ ಆತಂಕಗಳಿಗೆ ಎಡೆಗೊಡದ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಂತೆ ಮತ್ತೊಮ್ಮೆ ಶುಭ ಹಾರೈಸುತ್ತೇನೆ.

ಪರೀಕ್ಷೆಯಲ್ಲಿ ಅತಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

RELATED ARTICLES
- Advertisment -spot_img

Most Popular

error: Content is protected !!