Tuesday, April 29, 2025
Google search engine
Homeಅಂಕಣಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ; ಘಟಾನುಘಟಿಗಳೆಲ್ಲ ಗಪ್ಚುಪ್
spot_img

ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ; ಘಟಾನುಘಟಿಗಳೆಲ್ಲ ಗಪ್ಚುಪ್

ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಫಿನಾಲೆಗೆ ಹನುಮಂತ ಎಂಟ್ರಿ ನೀಡಿದ್ದಾರೆ. ಅವರ ಮುಂದೆ ಘಟಾನುಘಟಿ ಸ್ಪರ್ಧಿಗಳು ಕೂಡ ಗಪ್ಚುಪ್ ಆಗಿದ್ದಾರೆ. ಎಲ್ಲರಿಗೂ ಟಫ್ ಸ್ಪರ್ಧೆ ನೀಡಿ ಹನುಮಂತ ಅವರು ಫಿನಾಲೆಯ ಟಿಕೆಟ್ ಪಡೆದುಕೊಂಡಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಅವರಿಗೆ ಫಿನಾಲೆ ಟಿಕೆಟ್ ಮಿಸ್ ಆಗಿದೆ.

ಸಿಕ್ಕಾಪಟ್ಟೆ ಸಿಂಪಲ್ ಆಗಿ ಕಾಣಿಸುವ ಹನುಮಂತ ಸಾಮಾನ್ಯ ವ್ಯಕ್ತಿ ಅಲ್ಲ. ಆಟದಲ್ಲಿ ಅವರ ಚುರುಕುತನಕ್ಕೆ ಯಾರೂ ಸರಿಸಾಟಿ ಇಲ್ಲ. ಹೆಚ್ಚೇನೂ ಲೆಕ್ಕಾಚಾರ ಹಾಕದ ಅವರು ಆಟದ ಮೇಲೆ ಪೂರ್ಣ ಗಮನ ನೀಡುತ್ತಾರೆ. ಯಾವುದೇ ಟೆನ್ಷನ್ ಮಾಡಿಕೊಳ್ಳದೇ ಟಾಸ್ಕ್ ಆಡುತ್ತಾರೆ. ಅದರ ಫಲವಾಗಿ ಅವರಿಗೆ ಈಗಾಗಲೇ ಅನೇಕರ ಮೆಚ್ಚುಗೆ ಸಿಕ್ಕಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಫಿನಾಲೆ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಈ ಸಾಧನೆ ಮಾಡಿದ್ದಾರೆ.

ಫಿನಾಲೆ ಟಿಕೆಟ್ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಭವ್ಯಾ ಗೌಡ ಅವರು 3 ನಿಮಿಷ 22 ಸೆಕೆಂಡ್ ತೆಗೆದುಕೊಂಡರು. ರಜತ್ ಅವರು 3 ನಿಮಿಷ 49 ಸೆಕೆಂಡ್ ತೆಗೆದುಕೊಂಡರು. ತ್ರಿವಿಕ್ರಮ್ ಅವರು 2 ನಿಮಿಷ 30 ಸೆಕೆಂಡ್ ಪಡೆದುಕೊಂಡರು.

ಎಲ್ಲರಿಗಿಂತಲೂ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ್ದು ಹನುಮಂತ. ಅವರು ಕೇವಲ 2 ನಿಮಿಷ 27 ಸೆಕೆಂಡ್ ತೆಗೆದುಕೊಂಡು ಜಯ ಸಾಧಿಸಿದರು. ‘ಛೂ ಮಂತರ್’ ಸಿನಿಮಾದ ನಾಯಕ ನಟ ಶರಣ್ ಹಾಗೂ ನಾಯಕಿ ಅದಿತಿ ಪ್ರಭುದೇವ ಅವರು ಬಿಗ್ ಬಾಸ್ ಮನೆಗೆ ಬಂದು ಹನುಮಂತ ಅವರಿಗೆ ಫಿನಾಲೆಯ ಟಿಕೆಟ್ ನೀಡಿದರು. ಹನುಮಂತನ ಈ ಗೆಲುವಿಗೆ ಎಲ್ಲರೂ ಅಭಿನಂದನೆ ತಿಳಿಸಿದರು. ಕೇವಲ 3 ಸೆಕೆಂಡ್ ಅಂತರದಲ್ಲಿ ಸೋತಿದ್ದಕ್ಕೆ ತ್ರಿವಿಕ್ರಮ್ ಅವರಿಗೆ ಬೇಸರ ಆಯಿತು. ಇಲ್ಲಿಯ ತನಕ ಬಂದು ಫಿನಾಲೆ ಟಿಕೆಟ್ ಮಿಸ್ ಮಾಡಿಕೊಂಡಿದ್ದಕ್ಕೆ ಭವ್ಯಾ ಗೌಡ ಕೂಡ ಸಖತ್ ಬೇಸರ ಮಾಡಿಕೊಂಡರು.

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಯಾರ ಬಳಿಯೂ ದ್ವೇಷ ಕಟ್ಟಿಕೊಂಡಿಲ್ಲ. ಹಾಗಂತ ಅವರು ತಮ್ಮ ಅಭಿಪ್ರಾಯವನ್ನು ಹೇಳದೇ ಉಳಿದಿಲ್ಲ. ಎಲ್ಲವನ್ನೂ ಶುದ್ಧ ಮನಸ್ಸಿನಿಂದ ಹೇಳಿದ್ದರಿಂದ ಅವರನ್ನು ಯಾರೂ ದ್ವೇಷಿಸುತ್ತಿಲ್ಲ. ಹೊರಗೆ ಕೂಡ ಹನುಮಂತ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ಹನುಮಂತ ಅಂತಮವಾಗಿ ಫಿನಾಲೆ ಘಟ್ಟಕ್ಕೆ ಬಂದಿದ್ದಾರೆ. ಅಲ್ಲದೇ ಈ ಸೀಸನ್ನ ಕೊನೆಯ ಕ್ಯಾಪ್ಟನ್ ಆಗಿ ಕೂಡ ಅವರು ಆಯ್ಕೆ ಆಗಿದ್ದಾರೆ. ಆದ್ದರಿಂದ ಅವರನ್ನು ಅಲ್ಟಿಮೇಟ್ ಕ್ಯಾಪ್ಟನ್ ಎಂದು ಘೋಷಿಸಲಾಗಿದೆ.

RELATED ARTICLES
- Advertisment -spot_img

Most Popular

error: Content is protected !!