Tuesday, April 29, 2025
Google search engine
Homeಕ್ರೈಂಮೈಸೂರಿಗೆ ಹೋಗಲು ಅನುಮತಿ ನೀಡಿದ ನ್ಯಾಯಾಲಯ : ಫಾರ್ಮಹೌಸ್ನಲ್ಲಿ ದಾಸನ ಸಂಕ್ರಾಂತಿ !
spot_img

ಮೈಸೂರಿಗೆ ಹೋಗಲು ಅನುಮತಿ ನೀಡಿದ ನ್ಯಾಯಾಲಯ : ಫಾರ್ಮಹೌಸ್ನಲ್ಲಿ ದಾಸನ ಸಂಕ್ರಾಂತಿ !

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ಗೆ ನ್ಯಾಯಾಲಯ 5 ದಿನಗಳ ಕಾಲ ಮೈಸೂರಿಗೆ ತೆರಳಲು ಅವಕಾಶ ನೀಡಿದ್ದು. ಈ ಬಾರಿಯ ಸಂಕ್ರಾಂತಿಯನ್ನು ನಟ ದರ್ಶನ್ ತನ್ನ ಫಾರ್ಮಹೌಸ್ನಲ್ಲಿಯೇ ಆಚರಿಸಲಿದ್ದಾರೆ.

ಕೊಲೆ ಪ್ರಕರಣದಲ್ಲಿ ಇಂದು ನ್ಯಾಯಾಲಯಕ್ಕೆ ಬಂದು ವಿಚಾರಣೆ ಎದುರಿಸಿದ ನಟ ದರ್ಶನ್ ಮತ್ತು ಗ್ಯಾಂಗ್ನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 25ಕ್ಕೆ ಮುಂದೂಡಿದೆ. ಇದರ ಜೊತೆಗೆ ನಟ ದರ್ಶನ್ ಮತ್ತೆ ಮೈಸೂರಿಗೆ ತೆರಳಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ದರ್ಶನ್ಗೆ ಮೈಸೂರಿಗೆ ತೆರಳಲು ಅವಕಾಶ ನೀಡಿದೆ.

ಇದೇ ಜನವರಿ 12ರಿಂದ 5 ದಿನಗಳ ಕಾಲ ಮೈಸೂರಿಗೆ ಹೋಗಲು ಅನುಮತಿ ನೀಡುವಂತೆ ನಟ ದರ್ಶನ್ ಅರ್ಜಿ ಸಲ್ಲಿಸಿದ್ದರು. ದರ್ಶನ್ ಪರವಾಗಿ ವಾದ ಮಂಡಿಸಿದ ವಕೀಲ ಸುನೀಲ್ ಕುಮಾರ್ ದರ್ಶನ್ಗೆ ಸಂಕ್ರಾಂತಿಯ ಉಡುಗೊರೆ ನೀಡಿದ್ದಾರೆ.

ಪವಿತ್ರಾಗೂ ಮುಂಬೈಗೆ ತೆರಳಲು ಅವಕಾಶ ನೀಡಿದ ನ್ಯಾಯಾಲಯ !

ದರ್ಶನ್ ಜೊತೆಗೆ ಪವಿತ್ರ ಗೌಡಾಗೂ ಬೆಂಗಳೂರು ಬಿಟ್ಟು ಹೊರಗೆ ಹೋಗಲು ಅನುಮತಿ ನೀಡಿದ್ದು. ಮುಂಬೈ ಅಥವಾ ದೆಹಲಿಗೆ ತೆರಳಲು ಅವಕಾಶ ನೀಡಲಾಗಿದೆ. ದೇವಸ್ಥಾನ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ವಿಶಯಗಳಿಗೆ ಅನುಮತಿ ನೀಡಿದೆ.

ಪವಿತ್ರಾ ಗೌಡ ರೆಡ್ ಕಾರ್ಪೆಟ್ ಶೋರೂಂಗೆ ರಾ ಮೆಟಿರಿಯಲ್ ತರಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಈ ವಿಚಾರಣೆಯನ್ನು ನಡೆಸಿರುವ ನ್ಯಾಯಾಲಯ ಅವಕಾಶ ನೀಡಿದೆ. ಈ ಶೋರೂಂ ನಗರದ ಆರ್.ಆರ್ ನಗರದಲ್ಲಿದೆ ಎಂದು ಹೇಳಿದರು.

RELATED ARTICLES
- Advertisment -spot_img

Most Popular

error: Content is protected !!