ಬೆಳಗಾವಿ :ಹುದಲಿ: ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಶುಕ್ರವಾರ ಜ.10 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನವಾಗಿ ಅಧ್ಯಕ್ಷರಾಗಿ ಚಂದ್ರು ತಿಪ್ಪಣ್ಣಾ ಕುಂದರಗಿ ಹಾಗೂ ಉಪಾಧ್ಯಕ್ಷರಾಗಿ ಶಿವಾನಂದ ನಾಗಪ್ಪಾ ಪಡಗುರಿ ಅವರು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೂ ಮೊದಲು ಸಂಘದ ಡಿಸೆಂಬರ್ 29 ರಂದು ಜರುಗಿದ 12 ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ 1) ಅಡಿವೇಪ್ಪಾ ಗಂಗಪ್ಪಾ ಗಿಡಗೇರಿ, 2) ಅಡಿವೇಪ್ಪಾ ಬ. ಮಾಳಗಿ, 3) ಚನಬಸಪ್ಪಾ ಶ. ಪವಾಡಿ, 4) ಭರಮಪ್ಪಾ ಮು. ಮಾಳಗಿ, 5) ಭೀಮಪ್ಪಾ ಕ. ಮಳಗಲಿ 6) ಶ್ರೀಮತಿ ನಿರ್ಮಲಾ ಚ ಮಾಳಗಿ, 7) ಶ್ರೀಮತಿ ಬಸವ್ವಾ/ಬಸವರಾಜೇಶ್ವರಿ ಬ ತೋಟಗಿ, 8) ರಿಯಾಜ್‌ಖಾನ ಮ ಬಾಳೇಕುಂದ್ರಿ, 9) ಪರಸಪ್ಪಾ ಜ ಹರಿಜನ 10) ಮಂಜುನಾಥ ವಿ ಮಜ್ಜಗಿ ಇವರುಗಳನ್ನು ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿಗಳಾದ ಆರ್ ಬಿ ಪಾಟೀಲ ಅವರು ತಿಳಿಸಿದರು.