Tuesday, April 29, 2025
Google search engine
Homeರಾಜ್ಯBelagavi: ಕುಂದಾನಗರಿಯಲ್ಲಿ ಕಾಣಿಸಿಕೊಂಡ ಹುಲಿ, ಕಾಡು ಕೋಣ- ಆತಂಕದಲ್ಲಿ ಜನರು
spot_img

Belagavi: ಕುಂದಾನಗರಿಯಲ್ಲಿ ಕಾಣಿಸಿಕೊಂಡ ಹುಲಿ, ಕಾಡು ಕೋಣ- ಆತಂಕದಲ್ಲಿ ಜನರು

ಬೆಳಗಾವಿ: ಕುಂದಾನಗರಿ ಬೆಳಗಾವಿಯ(Belagavi) ಜನನಿಬಿಡ ಪ್ರದೇಶಗಳಲ್ಲಿ  ಕಾಡು ಪ್ರಾಣಿಗಳು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಒಂದೇ ದಿನ ಎರಡು ದೈತ್ಯ ಪ್ರಾಣಿಗಳು(Wild Animals) ಬಯಲಿಗೆ ಬಂದಿದ್ದು,  ಸ್ಥಳೀಯರ ಮೊಬೈಲ್‌ನಲ್ಲಿ(Mobile) ಸೆರೆಯಾಗಿವೆ.

ಖಾನಾಪೂರ ತಾಲೂಕಿನ ಲೋಂಡಾ-ಕಾಪೋಲಿ ರಸ್ತೆಯಲ್ಲಿ ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಕಾಡು ಕೋಣದ ಚಲನವಲನಗಳನ್ನು ಮೊಬೈಲ್‌ನಲ್ಲಿ ಸ್ಥಳೀಯರು ಸೆರೆಹಿಡಿದ್ದಾರೆ. ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಯುವಕ ವಾಹೀದ್ ಸಕಲಿ ಎಂಬಾತ ತನ್ನ ಮೊಬೈಲ್‌‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ.

ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿದ್ದು, ರಸ್ತೆ ದಾಟಿ ಮತ್ತೆ ಕಾಡಿನತ್ತ ಪ್ರಯಾಣ ಬೆಳೆಸಿದೆ. ಹಾಗೆಯೇ, ಜಾಂಬೋಟಿಯ ಕಣಕುಂಬಿ ಸಮೀಪದ ಹುಳಂದ-ಕಣಕುಂಬಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಹುಲಿ ಪ್ರತ್ಯಕ್ಷವಾಗಿರುವ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ.‌

ಖಾನಾಪೂರ  ತಾಲೂಕಿನ ಅತ್ಯಂತ ದಟ್ಟ ಅರಣ್ಯ ಪ್ರದೇಶವೆಂದೇ ಗರುತಿಸಲ್ಪಡುವ ಜಾಂಬೋಟಿಯ ಕಣಕುಂಬಿ ಹುಳಂದ- ಕಣಕುಂಬಿ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ಜನರು ಗಾಬರಿಯಾಗಿದ್ದಾರೆ.‌ ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ, ಹುಲಿಯಿಂದ ನಾಗರಿಕರನ್ನು ರಕ್ಷಿಸಲು ಮುಂದಾಗಬೇಕು ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!