ಖಾನಾಪುರ: ಕಳೆದ ಎರಡು ತಿಂಗಳಿಂದ ಖಾನಾಪುರದ ಕರಂಬಳ ಚಾಪಗಾಂವ ಗ್ರಾಮಗಳ ಸುತ್ತ ರೈತರಿಗೆ ತೊಂದರೆ ಕೊಡುತ್ತಿದ್ದ ಆನೆಯನ್ನ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ ಗುರುವಾರ ಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಅರಣ್ಯ ಸಕ್ರೆಬೈಲು ಆನೆ ಬಿಡಾರದ ನುರಿತ ಆನೆಗಳ ಸಹಾಯದಿಂದ ಪುಂಡ ಆನೆಯನ್ನ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಳೆದ ಎರಡು ತಿಂಗಳಿನಿಂದ ಖಾನಾಪೂರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ರೈತರು ಆತಂಕದಲ್ಲಿದ್ದರು ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಶಿವಮೊಗ್ಗದ ಸಕ್ರಬೈಲು ಆನೆಬಿಡಾರದ ಆನೆಗಳ ತಂಡ ಆನೆ ಹಿಡಿಯುವ ಕಾರ್ಯಾಚರಣೆ ನಡೆಸುವ ಮೂಲಕ ಪರಿನಿತ ಆನೆಗಳ ತಂಡಕ್ಕೆ ಖಾನಾಪೂರ ಎಸಿಎಫ್ ಸುನೀತಾ ನಿಂಬರಗಿ ಪೂಜೆ ಸಲ್ಲಿಸಿ ಕಾರ್ಯಾಚರಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು ಕಾಡಾನೆಯ ಚಲನವಲನಗಳ ಬಗ್ಗೆ ಸುಕ್ಷ್ಮವಾಗಿ ಗಮನಿಸಿ ಕಾರ್ಯಾಚರಣೆ ನಡೆಸುವ ಕಾರ್ಯ ನಡೆಸಿದ್ದಾರೆ.
ಸಂದರ್ಭದಲ್ಲಿ ಖಾನಾಪೂರ ಆರ್ ಎಫ್ ಒ ಶ್ರೀಕಾಂತ್ ಪಾಟೀಲ್, ನಂದಗಡದ ವಲಯ ಅರಣ್ಯಾಧಿಕಾರಿ ಮಾಧುರಿ ದಳವಾಯಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಈ ಕಾರ್ಯಾಚರಣೆಗೆ ವಿಶೇಷ ಆಸಕ್ತಿಯಿಂದ ಭರದಿಂದ ಕಾಡಾನೆ ಸೆರೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಾಗ್ರತೆ ವಹಿಸಿದ್ದರು.