Monday, December 23, 2024
Google search engine
Homeರಾಜ್ಯಪಾರವಾಡ ಗ್ರಾಮ ಪಂಚಾಯತಿಯಲ್ಲಿ ನರೇಗಾ ಅವ್ಯವಹಾರ  ಹೇಳುವರು ಇಲ್ಲ ...ಕೇಳುವರು ಇಲ್ಲ.. ಇವರದೇ ದರ್ಬಾರ್...

ಪಾರವಾಡ ಗ್ರಾಮ ಪಂಚಾಯತಿಯಲ್ಲಿ ನರೇಗಾ ಅವ್ಯವಹಾರ  ಹೇಳುವರು ಇಲ್ಲ …ಕೇಳುವರು ಇಲ್ಲ.. ಇವರದೇ ದರ್ಬಾರ್…

ಬೆಳಗಾವಿ: ಖಾನಾಪೂರ ತಾಲೂಕಿನ ಪಾರವಾಡ ಗ್ರಾಮ ಪಂಚಾಯತಿ ಮತ್ತು ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ನರೇಗಾ ಉದ್ಯೋಗ ಖಾತ್ರಿ ಯೋಜನೆ  ಅಡಿ  ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ.

ಸರ್ಕಾರವು ಎಲ್ಲ ಕೂಲಿ ಕಾರ್ಮಿಕರಿಗೆ ನೇರವು ಆಗಲಿ‌ ಅವರುಗಳ ದಿನ ನಿತ್ಯದ ಭವಿಷ್ಯ ಉಜ್ವಲವಾಗಲಿ ಸರ್ಕಾರವು ಉದ್ಯೋಗವನ್ನು ಸೃಜಿಸಿ ಬಹಳ ಮಹತ್ವದ ಯೋಜನೆಯಾದ ನರೇಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಿದರೆ.

ಕೂಲಿ ಕಾರ್ಮಿಕರನ್ನು ಮುಂದೆ ಇಟ್ಟುಕೊಂಡು ಗ್ರಾಮ ಪಂಚಾಯತಿಯಲ್ಲಿ ಯಾವಾಗಲೂ ನಡೆದು ಹೋಗಿರುವ ನರೇಗಾ ವಿವಿಧ ಕಾಮಗಾರಿಗಳಲ್ಲಿ ಕೆಲಸ ಮಾಡಿರುವ‌ ಕಾರ್ಮಿಕರ ಪೋಟೋಗಳನ್ನು ಸೇರೆ ಹಿಡಿದಿರುವ ಪೋಟೋಗಳನ್ನು  ಬಳಸಿಕೊಂಡು ಇವಾಗ ನಡೆದಿರುವ ಕಾಮಗಾರಿಗಳಿಗೆ ಜೋಡಣೆ ಮಾಡಿ ಬಿಲ್ ತೆಗೆಯುವ ಕಾರ್ಯ ನಡೆದಿರುತ್ತದೆ.

ಅಲ್ಲದೇ ಇದರೋಳಗಡೆ ವಿಪರ್ಯಾಸವೆಂದರೆ ಇನ್ನೂ ವಯಸ್ಕರಾಗದ (18) ವರ್ಷ ಪೂರೈಸದೆ ಇರುವ ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುವುದಲ್ಲದೆ. ಚಿಕ್ಕ ಹುಡಗನ ಪೋಟೋಗೆ ಜಾಬ್ ಕಾರ್ಡ್ ಇರುವ ಯುವತಿಯರ ಹೆಸರು ಹಾಕಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಮಹಾ ಅಪರಾಧ ಇದು ಕಾನೂನು ಬಾಹಿರವಾಗಿದೆ. ಅದೆ ಮಕ್ಕಳ ಫೋಟೋವನ್ನು ನರೇಗಾ ವೆಬ್ ಸೈಟ್ ಗೆ ಹಾಕಿರುವುದು ಬೆಳಕಿಗೆ ಬಂದಿದೆ.

ನರೇಗಾ ಮೇಲಾಧಿಕಾರಿಗಳು ಕಣ್ಣು ಮುಚ್ಚಿಕೊಂಡು ಅನುಮೋದನೆ ನೀಡುತ್ತಿದ್ದಾರೇ ಎಂಬ ಪ್ರಶ್ನೆ..? ಉದ್ಬವವಾಗಿದೆ. ಇದರಿಂದ ತಿಳಿದು ಬರುವ ವಿಷಯ‌ ಏನೆಂದರೆ ಮೇಲಾಧಿಕಾರಿಗಳಿಗೂ ಗಿಬಂಳ ತಲುಪುತ್ತಿದೆ ಎಂಬರ್ಥ ಇದು ಒಂದು ಪಂಚಾಯತಿಯ ಹಣೆಬರಹವಾದರೆ ಇನ್ನೂಳಿದ ಪಂಚಾಯತಿಯಲ್ಲಿಯೂ ಇದೇ ರೀತಿ ಕಾರ್ಯ ನಡೆಯುತ್ತಿದೆ  ಎಂದು ಮೇಲಾಧಿಕಾರಿಗಳಿಂದ ಮೌಖಿಕವಾಗಿ ತಿಳಿದು ಬಂದಿರುವುದು ವಿಷಾದಕರ ಸಂಗತಿಯಾಗಿದೆ.

ಸಾರ್ವಜನಿಕರಿಗೆ ಒದಗಬೇಕಾಗಿದ ಮೂಲಭೂತ ಸೌಕರ್ಯಗಳ ನೇರವಾಗಿ ಜನರಿಗೆ ತಲುಪಬೇಕೆಂದು ಸರ್ಕಾರ ಹೆಚ್ಚು ಹೆಚ್ಚಾಗಿ ಯೋಜನೆಗಳನ್ನು ಅನುಷ್ಠಾನ ಮಾಡಿದರು. ಅಧಿಕಾರಿಗಳು ಯಾವ ಯಾವ ರೀತಿಯಲ್ಲಿ  ಭ್ರಷ್ಟಾಚಾರ ಮಾಡಬೇಕೆಂದು ಬಹಳ ಅಚ್ಚು ಕಟ್ಟಾಗಿ ತಯಾರಿ ಮಾಡಿಕೊಂಡಿ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅಧಿಕಾರ ವಹಿಸಿಕೊಂಡ ಬಳಿಕ ಗ್ರಾಮ‌ ಪಂಚಾಯತಿ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ.

ಇಂತಹ ಅಧಿಕಾರಿಗಳ ವಿರೋಧಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದಷ್ಟು ಬೇಗನೆ ಯಾವ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯಿದೆ.

ಸಂಪಾದಕರು,

ಸಮರ್ಥ ನಾಡು, ಕನ್ನಡ ದಿನಪತ್ರಿಕೆ, ಬೆಳಗಾವಿ.

RELATED ARTICLES
- Advertisment -spot_img

Most Popular

error: Content is protected !!