Monday, December 23, 2024
Google search engine
Homeಅಂಕಣವಿಜ್ಞಾನ ಪಾರ್ಕಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಭಾಧ್ಯಕ್ಷ : ಯು.ಟಿ.ಖಾದರ

ವಿಜ್ಞಾನ ಪಾರ್ಕಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಸಭಾಧ್ಯಕ್ಷ : ಯು.ಟಿ.ಖಾದರ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನ ಸೌಧದ ಆವರಣದಲ್ಲಿ ಮಕ್ಕಳಿಗೆ ಕಲಿಕೆ ಜೊತೆ ವಿಜ್ಞಾನದ ಕುರಿತು ಮಾಹಿತಿ ನೀಡುವ ವಿಜ್ಞಾನ ‌ಪಾರ್ಕ ಕಾಮಗಾರಿಗಳನ್ನು ವಿಧಾನ ಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ ಫರೀದ್ ಅವರು ಭಾನುವಾರ ವೀಕ್ಷಿಸಿದರು.

ಕಾಮಗಾರಿಗಳನ್ನು ವೀಕ್ಷಿಸಿ ವಿಜ್ಞಾನ ಪಾರ್ಕನಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ಸಭಾಧ್ಯಕ್ಷರು ಮಕ್ಕಳಿಗೆ ಆಟದ ಜೊತೆ ವಿಜ್ಞಾನದ‌ ಪಾಠ ಹೇಳುವ ಕಾರ್ಯದ ಕುರಿತು ಮೆಚ್ಚುಗೆ‌ ವ್ಯಕ್ತ ಪಡಿಸಿದರು.

ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ವಿಜ್ಞಾನ ಪಾರ್ಕನಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ‌ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ವಿಧಾನ ಸಭಾ ಕಾರ್ಯದರ್ಶಿಗಳಾದ ಎಂ.ಕೆ.ವಿಶಾಲಾಕ್ಷಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -spot_img

Most Popular

error: Content is protected !!