ಬಿಗ್ ಬಾಸ್’ ಕಾರ್ಯಕ್ರಮ ಶುರುವಾಗುವ ಮುನ್ನ ಸಂಭಾವ್ಯ ಸ್ಪರ್ಧಿಗಳ ಪಟ್ಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗೋದು ಕಾಮನ್. ಆದರೆ, ಅಧಿಕೃತವಾಗಿ ಯಾರೆಲ್ಲಾ ‘ಬಿಗ್ ಬಾಸ್’ ಮನೆಯೊಳಗೆ ಸೇರಿದ್ದಾರೆ ಅಂತ ಗೊತ್ತಾಗೋದು ಪ್ರೀಮಿಯರ್ ಸಂಚಿಕೆ ಪ್ರಸಾರವಾದ್ಮೇಲೆ.! ತಮ್ಮೊಂದಿಗೆ ‘ಬಿಗ್ ಬಾಸ್’ ಮನೆ ಸೇರುವ ಇತರರು ಯಾರೂ ಅನ್ನೋದು ಸ್ಪರ್ಧಿಗಳಿಗೂ ಸಹ ಗೊತ್ತಿರೋದಿಲ್ಲ. ಗೊತ್ತಾಗೋಕೆ ಬಿಡೋದೂ ಇಲ್ಲ. ಯಾಕಂದ್ರೆ, ತಾವು ಸ್ಪರ್ಧಿ ಅಂತ ಯಾರೂ ಎಲ್ಲೂ ಲೀಕ್ ಮಾಡುವ ಹಾಗಿಲ್ಲ. ಇದೇ ‘ಬಿಗ್ ಬಾಸ್’ ಕಾರ್ಯಕ್ರಮದ ಬಹುದೊಡ್ಡ ನಿಯಮ. ಆದರೆ, ‘ಬಿಗ್ ಬಾಸ್’ ಮನೆ ಸೇರುವ ಮುನ್ನವೇ ತ್ರಿವಿಕ್ರಮ್‌ಗೆ ಸ್ಪರ್ಧಿಗಳ ಪಟ್ಟಿ ಸಿಕ್ಕಿತ್ತಂತೆ.!
‘’ಸ್ಪರ್ಧಿಗಳ ಲಿಸ್ಟ್ ಬಂದ್ಮೇಲೆ ನಾನು ಓಕೆ ಹೇಳಿದ್ದು’’ ಅಂತ ‘ಬಿಗ್ ಬಾಸ್’ ಮನೆಯಲ್ಲೇ ತ್ರಿವಿಕ್ರಮ್ ಹೇಳಿದ್ದಾರಂತೆ. ಹಾಗಂತ ಗೌತಮಿ ಜಾಧವ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಆರೋಪಿಸಿದ್ದಾರೆ. ಒಂದ್ವೇಳೆ.. ಇದು ನಿಜವೇ ಆಗಿದ್ದರೆ.. ‘ಬಿಗ್ ಬಾಸ್’ ಕಾರ್ಯಕ್ರಮದ ಬಹುದೊಡ್ಡ ನಿಯಮ ಮುರಿದಂತಾಗುತ್ತದೆ ಮತ್ತು ‘ಬಿಗ್ ಬಾಸ್’ ಶೋ ಬಗ್ಗೆಯೇ ಅನುಮಾನ ಮೂಡುತ್ತದೆ. ಹಾಗೇ, ಇತರೆ ಸ್ಪರ್ಧಿಗಳಿಗೆ ಅನ್‌ಫೇರ್ ಮಾಡಿದಂತೆ ಆಗುತ್ತದೆಯಾ
ಯಾರೆಲ್ಲಾ ಸ್ಪರ್ಧಿಗಳಾಗಿ ಬರ್ತಾರೆ ಅಂತ ತಿಳಿದುಕೊಂಡೇ ತ್ರಿವಿಕ್ರಮ್ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರಂತೆ. ಹಾಗಂತ ಕೆಲ ಸ್ಪರ್ಧಿಗಳು ಆರೋಪಿಸಿದ್ದಾರೆ. ಇದಕ್ಕೆ ವೀಕೆಂಡ್‌ನಲ್ಲಿ ಕ್ಲಾರಿಟಿ ಸಿಗುತ್ತಾ?