ಬಿಜೆಪಿ ಅಭ್ಯರ್ಥಿಯ ಜ್ಞಾನ, ಅನುಭವ ನೋಡಿ ಮತ ನೀಡಿ..
ಜಗದೀಶ್ ಶೆಟ್ಟರಗೆ ಶಾಸಕ ಅಭಯ್ ಪಾಟೀಲ್ ಸಾಥ್..
ಬೆಳಗಾವಿ : ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯ ಚೇಂಬರ್ಸ್ ಆಫ್ ಕಾಮರ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಮತಯಾಚನೆ ಮಾಡಿದರು ಈ ವೇಳೆ ಶಾಸಕ ಅಭಯ್ ಪಾಟೀಲ್ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಬೆಳಗಾವಿ ದಕ್ಷಿಣದ ಶಾಸಕರಾದ ಅಭಯ ಪಾಟೀಲ ಅವರು, ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ ಅಪಾರವಾದ ರಾಜಕೀಯ ಸಾಮಾಜಿಕ ಜ್ಞಾನ ಮತ್ತು ಅನುಭವ ಇದೆ, ಅಂತವರಿ ಅಧಿಕಾರ ದೊರಕಿದರೆ ಜಿಲ್ಲೆ ಅಭಿವದ್ಧಿ ಆಗುತ್ತದೆ, ಹೊಸ ಯೋಜನೆಗಳು ಜಿಲ್ಲೆಗೆ ಬಂದು, ನಮ್ಮಜಿಲ್ಲೇ ಮಾದರಿ ಜಿಲ್ಲೆಯಾಗಿತ್ತದೆ ಎಂದರು..
ಇನ್ನು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಚೇಂಬರ್ಸ್ ಆಫ್ ಕಾಮರ್ಸ್ ಸಂಸ್ಥೆಯ ಸಮಸ್ಯೆಗಳನ್ನು ಆಲಿಸಿ, ಬರುವ ದಿನಗಳಲ್ಲಿ ಕೇಂದ್ರದಿಂದ ಅನೇಕ ಅನುಕೂಲಕರ ಯೋಜನೆಗಳನ್ನು ತಂದು ಈ ಕ್ಷೇತ್ರದ ಉನ್ನತಿಯತ್ತ ಶ್ರಮಿಸುತ್ತೇನೆ ಎಂದರು…
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಗುರು ಆಗುವತ್ತ ದಾಪುಗಾಲು ಹಾಕುತ್ತಿದ್ದು, ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಅವರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡಿದ್ದೇನೆ. ತಾವೆಲ್ಲರೂ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಜಗದೀಶ್ ಶೆಟ್ಟರ್ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಚಿನ ಸಭನಿಸ್, ರಾಮ್ ಭಂಡಾರಿ, ಸಿ.ಸಿ. ಹೂಂದಿನಕಟ್ಟಿ, ಆನಂದ ದೇಸಾಯಿ, ಶ್ರೀಧರ ಉಪ್ಪಿನ,ರೋಹನ ಜೂವಳಿ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಕುರಗುಂದ..