ಲೋಕಸಭೆ ಚುನಾವಣೆ ದಿನಾಂಕ ಈಗಾಗಲೇ ಘಷಣೆ ಮಾಡಲಾಗಿದೆ. 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು. ಇದರ ಜೊತೆಗೆ ನಾಲ್ಕು ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ಮತ್ತು ಉಪಚುನಾವಣೆಗಳನ್ನು ಘೋಷಿಸಲಾಗಿದೆ.
ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಚುನಾವಣೆ ನಡೆಯಲಿದ್ದು. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ 2024ರಲ್ಲಿ ಐಪಿಎಲ್ ಟೂರ್ನಿಯನ್ನು
ದುಬೈಗೆ ಸ್ಥಳಾಂತರಿಸಲು ಬಿಸಿಸಿಐ ಮುಂದಾಗಿದ್ದು,
ಬಿಸಿಸಿಐ ತಂಡ ಈಗಾಗಲೇ ದುಬೈನಲ್ಲಿ ಬೀಡು
ಬಿಟ್ಟಿದ್ದು, ಐಪಿಎಲ್ ವೇಳಾಪಟ್ಟಿ ಕುರಿತು ಚರ್ಚೆ
ನಡೆಸುತ್ತಿದೆ.
ಅಲ್ಲದೆ ಲೋಕಸಭೆ ಚುನಾವಣೆಯ
ಕಾರಣ ಬಿಸಿಸಿಐ 2024ರ ಐಪಿಎಲ್ ಟೂರ್ನಿಯ
ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ
ಪ್ರಕಟಿಸಿದೆ. ಇದೀಗ ಲೋಕಸಭೆ ಚುನಾವಣೆ ದಿನಾಂಕ
ಘೋಷಣೆಯಾಗುತ್ತಿದ್ದಂತೆ ಬಿಸಿಸಿಐ ಚಟುವಟಿಕೆ
ಚುರುಕುಗೊಂಡಿದೆ.
ಬಿಸಿಸಿಐ ತಂಡ ಸದ್ಯ ದುಬೈನಲ್ಲಿದೆ. ದುಬೈನಲ್ಲಿ
ಐಪಿಎಲ್ ವಿಮರ್ಶೆ ನಡೆಯಲಿದೆ. IPLನ 10
ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರ
ಪಾಸ್‌ಪೋರ್ಟ್ ವಿವರಗಳನ್ನು ನೀಡುವಂತೆ
ಕೇಳಲಾಗಿದೆ.