ಬೆಳಗಾವಿ: ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹುದಲಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ನಿಮಿತ್ತವಾಗಿ ಚರಂಡಿ, ಸಿಸಿ ರಸ್ತೆ ಹಾಗೂ ರಸ್ತೆ ಡಾಂಬರೀಕರಣ ಹಾಗೂ ಸುಮಾರು 5 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ಹಾಗೂ ಹುದಲಿ-ಕಲಕಾಂಬ ಗ್ರಾಮದ ಬಿಜೆಪಿ- ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುದಲಿ-ಕಲಕಾಂಬ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಯುವಕರು-ಸುಮಾರು 5 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವರು.
ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ರಾಜ್ಯಾದ್ಯಂತ ಆಗುತ್ತಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ. ಕಾರ್ಯ ಕರ್ತರು ನಿಷ್ಠೆಯಿಂದ ಕೆಲಸ ಮಾಡಿದರೆ ಮುಂದೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಜನರಿಗೆ ಯಾವುದೇ ಕೆಲಸಗಳು ಆಗಿಲ್ಲ. ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ. ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಬಿಜೆಪಿ ಪಕ್ಷದವರು ಸಹಿಸಿಕೊಳ್ಳುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಗ್ರಾಮ ದೇವಿ ಜಾತ್ರೆ ನಿಮಿತ್ತ 5 ಕೋಟಿ ರೂ. ವಿವಿಧ ಕಾಮಗಾರಿಗೆ ಚಾಲನೆ: ಗ್ರಾಮದಲ್ಲಿ ನಡೆಯುವ ಗ್ರಾಮ ದೇವಿ ಜಾತ್ರೆಗೆ ರಸ್ತೆ ಹಾಗೂ ಒಳಚರಂಡಿ ಸೇರಿದಂತೆ 5 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಲದೇ ಯಮಕನಮರಡಿ ಹಾಗೂ ಹುದಲಿ ಗ್ರಾಮಕ್ಕೆ ಅಭಿವೃದ್ಧಿ ಕೆಲಸ ಮಾಡುವುದು ಹೊಸದೆನಲ್ಲ. ಗ್ರಾಮದಲ್ಲಿ ಯಾವಾಗ ಸಮಸ್ಯೆ ಇದೆ ಎಂದು ಹೇಳಿದಾಗಲೆಲ್ಲ ಸಮಸ್ಯೆ ಬಗೆಹರಿಸಲಾಗಿದೆ.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ಇರುವದರಿಂದ ಹೆಚ್ಚೆಚ್ಚು ಅನುದಾನ ತರಲಾಗಿದೆ. ಸುಮಾರು 15 ವರ್ಷಗಳಲ್ಲಿ ಕ್ಷೇತ್ರಕ್ಕೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿ ಸೇರಿದಂತೆ ಶಾಲೆಗಳನ್ನ ಪ್ರಾರಂಭ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಗ್ರಾಮಸ್ಥರು ನಮ್ಮ ಪಕ್ಷಕ್ಕೆ ಆಶಿರ್ವಾದ ಮಾಡಿ ಹಳ್ಳಿಗಳ ಇನಷ್ಟು ಅಭಿವೃದ್ಧಿಯಾಗಲು ಸಹಕರಿಸಬೇಕು. ಎಂದು ಹೇಳಿದರು.
ನಮ್ಮಿಂದ ಯಾವಾಗಲೂ ಇಲ್ಲ ಎಂಬ ಉತ್ತರ ಬಂದಿಲ್ಲ. ಅಲ್ಲದೇ ಗ್ರಾಮದಲ್ಲಿ ನಿರಂತರವಾಗಿ ಅಭಿವೃದ್ದಿ ಕೆಲೆಸ ಕಾರ್ಯಗಳನ್ನು ಮಾಡಲಾಗಿದೆ ಎಂದ ಅವರು, ನಾಲ್ಕು ಚುನಾವಣೆಗಳಲ್ಲಿ ನಾನು ಗೆದ್ದಿದ್ದು, ಪ್ರತಿ ಭಾರಿ ಮತಗಳ ಸಂಖ್ಯೆ ಏರುತ್ತಾ ಹೋಗಿದೆ. ಮೊದಲ ಭಾರಿಗೆ ಗೆದ್ದಾಗ 46 ಸಾವಿರ, 2ನೇ ಭಾರಿಗೆ ಗೆದ್ದಾಗ 70 ಸಾವಿರ ಮತಗಳು, 3ನೇ ಭಾರಿಗೆ 73 ಸಾವಿರ ಮತಗಳು, 4ನೇ ಬಾರಿ 1 ಲಕ್ಷ 4 ಸಾವಿರ ಮತಗಳನ್ನು ಪಡೆಯಲಾಗಿದೆ, ಮುಖ್ಯವಾಗಿ 15 ವರ್ಷಗಳಲ್ಲಿ ಯಮಕನಮರಡಿ ಕ್ಷೇತ್ರಕ್ಕೆ ಬರುವ ಹಳ್ಳಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಮಾದರಿಗ್ರಾಮಗಳು ಎನ್ನುವಂತೆ ಮಾಡಲಾಗಿದೆ ಎಂದರು.
ಇದೇ ವೇಳೆ ಬಿಜೆಪಿ-ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನೂರಾರು ಯುವಕರಿಗೆ ಸಚಿವ ಸತೀಶ್ ಜಾರಕಿಹೊಳಿ ಸನ್ಮಾನಿಸಿದರು. ಇದೇ ವೇಳೆ ಗ್ರಾಮದ ಮುಖಂಡರು ಹಾಗೂ ಪಕ್ಷದ ಹಿರಿಯ ಮುಖಂಡರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಹೂಗುಚ್ಚ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ ಅರವಿಂದ್ ಕಾರ್ಚಿಹಾಗೂ ಗ್ರಾಮದ ಹಿರಿಯ ಮುಖಂಡರು, ಪಿಕೆಪಿಎಸ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಖಾದಿ ಗ್ರಾಮೋದ್ಯೋಗದ ನಿರ್ದೇಶಕ ಮಡಳಿಯವರು ಹಾಗೂ ಯುವಕರು, ಸರ್ವ ಸದಸ್ಯರು ಉಪಸ್ಥಿತರಿದ್ದರು.