ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿನಿಧಿಸುವ ಕ್ಷೇತ್ರ ಬೆಳಗಾವಿ
ತಾಲೂಕಿನ ಬಿ.ಕೆ.ಕಂಗ್ರಾಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ವೈಭನಗರದ ಸತೀಶ ಕಾಲೋನಿ, ನಿವಾಸಿಗಳ ಪರದಾಟ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 30 ವರ್ಷಗಳಿಂದ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ಬೆಳಗಾವಿ ಸ್ಮಾರ್ಟ್ ಸಿಟಿ ವ್ಯಾಪ್ತಿ, ಏ ಗ್ರೇಡ್ ಪಂಚಾಯತ್ ಇದ್ರೂ ಕೂಡ ನೀರಿನ ಭವನೆ ನೀಗುತ್ತಿಲ್ಲ.
ರೊಚ್ಚಿಗೆದ್ದ ಜನ ಬೀದಿಗಿಳಿದು ನೀರಿಗಾಗಿ ಆಗ್ರಹ ನಡೆಸಿ, ಹಲವು ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಮನವಿ ಮನವಿ ಕೂಡ ಸಲ್ಲಿಸಿದ್ದಾರೆ. ಆದರೆ ಸಚಿವರು ಯಾವುದೇ ಮನವಿಗೂ ಸ್ಪಂದಿಸಿಲ್ಲ ಎಂದು ಇಲ್ಲಿನ ಜನರು ಗೊಳಾಡುತಿದ್ದಾರೆ.
ಶಾಲಾ-ಕಾಲೇಜು ಬಿಟ್ಟು ನೀರು ನೀರಿಗಾಗಿ ಮಕ್ಕಳು ಅಲೆದಾಡುತ್ತಿದ್ದಾರೆ. ನಿತ್ಯವೂ ದುಡ್ಡು ಕೊಟ್ಟು ನೀರು ಕುಡಿಯುತ್ತಿರುವ ಹೆಬ್ಬಾಳಕರ್ ಕ್ಷೇತ್ರದ ಜನರು
ಸಂಬಂಧಿಸಿ ಅಧಿಕಾರಿಗಳು, ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದಾರೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ತಮ್ಮ ಕ್ಷೇತ್ರದ ಜನರ ಕಷ್ಟಗಳಿಗೆ ನಿರಂತರ ಸ್ಪಂದಿಸುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಾತ್ರ ಇತ್ತಕಡೆ ಕ್ಯಾರೇ ಅನ್ನುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.