Thursday, October 16, 2025
Google search engine
Homeಜಿಲ್ಲಾಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
spot_img

ಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ, ಸೆ 09: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಡಿ ಬರುವ ಕೆಇಬಿ ಸಬ್ ಸ್ಟೇಷನ್, ಮೊಬೈಲ್ ಟವರ್ ಮತ್ತು ವಿಂಡ್ ಮಿಲ್ ಗಳು ಬಾಕಿ ಇರುವ ತೆರಿಗೆಯನ್ನು ವಸೂಲಾತಿ ಮಾಡಲು ಸೂಕ್ತ ಕ್ರಮ ಕೈಕೊಂಡು ಕರ ವಸೂಲಾತಿಯಲ್ಲಿ ಶೇ 100 ಪ್ರಗತಿ ಸಾಧಿಸಲು ಎಲ್ಲಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ನಿರ್ದೇಶನ ನೀಡಿದರು .

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಸೆ. 9) ಜರುಗಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಸಕಾಲ ಯೋಜನೆ” ಯಡಿ ಕಾಲಮಿತಿ ಮೀರಿ ಬಾಕಿ ಉಳಿದ ಆರ್ಜಿಗಳನ್ನು ಮುಂದಿನ 2 ದಿನದಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು, ಇದರಿಂದ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗಾವಹಿಸುವುದು, ಮುಂದಿನ ದಿನಗಳಲ್ಲಿ ಈ ರೀತಿ ತಪ್ಪು ಕಂಡು ಬಂದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸುವುದಾಗಿ ಸಭೆಯಲ್ಲಿ ತಿಳಿಸಿದರು. 15ನೇ ಹಣಕಾಸು ಯೋಜನೆ ಅಡಿ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ, ನೈಜ ಕಾಮಗಾರಿಗಳಿಗೆ ಪಾವತಿ ಮಾಡಿ ಪ್ರಗತಿ ಸಾಧಿಸುವುದು ಮತ್ತು ಬಾಕಿ ಇರುವ ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು

ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿ ನಂತರ ಹರ್ ಘರ್ ಜಲ್ ಗ್ರಾಮ ಎಂದು ಘೋಷಣೆ ಮಾಡಲು ಕ್ರಮವಹಿಸಲು ಸೂಚಿಸಿದರು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಮೇಲ್ಮಟ್ಟದ ನೀರು ಸಂಗ್ರಹಣಾ ಘಟಕಗಳನ್ನು ಮಾರ್ಗಸೂಚಿಗಳನ್ವಯ ಸ್ವಚ್ಚತೆ ಹಾಗೂ ಸುರಕ್ಷತೆಗೆ ಕ್ರಮ ವಹಿಸಬೇಕು. ಮಳೆಗಾಲದ ಸಮಯದಲ್ಲಿ ಪ್ರತಿ ಗ್ರಾಮಗಳಲ್ಲಿ ಎಫ್ ಟಿ ಕೆ ಮುಖಾಂತರ ಕುಡಿಯುವ ನೀರನ್ನು ಪರೀಕ್ಷಿಸಿ ಮಾಡಿ ನಂತರ ನೀರು ಪೂರೈಕೆ ಮಾಡುವುದು, ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಗಮನ ಹರಿಸಬೇಕು. ಆಯಾ ತಾಲೂಕು ಪಂಚಾಯತ ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿರುವ ಕುರಿತು ಜಿಲ್ಲಾ ಪಂಚಾಯತಿಗೆ ವರದಿ ನೀಡುವುದು. ನೀರು ಶುದ್ಧೀಕರಣ ಘಟಕಗಳನ್ನು ನಿರಂತರ ನಿರ್ವಹಣೆ ಮಾಡಬೇಕು. ಕೆಲವು ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕಗಳು ಗ್ರಾಮದಿಂದ ಸ್ವಲ್ಪ ದೂರದಲ್ಲಿದ್ದು ಅಂತಹ ಶುದ್ಧೀಕರಣ ಘಟಕಗಳನ್ನು ಪಟ್ಟಿ ಮಾಡಿ ಸಮಿತಿಗೆ ಸಲ್ಲಿಸಬೇಕು ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಸರಬರಾಜು ಪ್ರಗತಿಗೆ ಅಗತ್ಯದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಸ್ವಚ್ಛ ಭಾರತ ಮಿಷನ್ ಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ 13 ತಾಲ್ಲೂಕುಗಳಲ್ಲಿ ಪಿ.ಡಬ್ಲ್ಯೂ.ಎಮ್. ಘಟಕಗಳಲ್ಲಿ ಪ್ಲಾಸ್ಟಿಕ್ ವೇಸ್ಟ ಮ್ಯಾನೇಜಮೆಂಟ ಮಷೀನ್ಗಳನ್ನು ಅಕ್ಟೋಬರ್-2ರ ರೊಳಗಾಗಿ ಅಳವಡಿಸಿ ಉದ್ಘಾಟನೆಯನ್ನು ಮಾಡಬೇಕು. ಬಾಕಿ ಇರುವ ವೈಯಕ್ತಿಕ ಗೃಹ ಶೌಚಾಲಯಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸಿಸುವುದು. ಜೊತೆಗೆ ಮಾದರಿ ಗ್ರಾಮಗಳ ಘೋಷಣೆ ಮಾಡುವುದು. ಗೋಕಾಕ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಎಮ್.ಆರ್.ಎಫ‍್ (ವಸ್ತು ಪುಸ್ಸಂಪಾದನಾ ಸೌಲಭ್ಯ) ಘಟಕವನ್ನು ತ್ವರೀತಗತಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ನಿರ್ದೇಶನ ನೀಡಿದರು.

ಮನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ನೀಡಿ ಪ್ರಸಕ್ತ ವರ್ಷದ ಗುರಿ ಸಾಧಿಸುವುದು. ಅಲ್ಲದೇ ರೈತ ಸಂಘಗಳು ಮತ್ತು ಗ್ರಾಮೀಣ ಕೂಲಿಕಾರರ ಜೊತೆ ತಾಲ್ಲಾಕಾ ಮಟ್ಟದ ಜಂಟಿ ಸಭೆಗಳನ್ನು ಜರುಗಿಸಿ ಅವರ ಕುಂದು ಕೊರತೆಗಳನ್ನು ಪರಿಶೀಲಿಸಿ ಕೆಲಸ ನೀಡುವಂತೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ರವರಿಗೆ ನೀರ್ದೇಶನ ನೀಡಿದರು. ಎನ್.ಎಮ್.ಎಮ್. ಎಸ್ ಕುರಿತು ಪ್ರತಿ ನಿತ್ಯ ಗ್ರಾಮ ಪಂಚಾಯತ ಮತ್ತು ತಾಲ್ಲೂಕು ಪಂಚಾಯತಿಯಿಂದ ಸಂಬಂಧ ಪಟ್ಟ ಅಧಿಕಾರಿಗಳು ಶೇ 100 ರಷ್ಟು ಪರಿಶೀಲನೆ ಮಾಡುವುದು. ಸಾಮಾಜಿಕ ಲೆಕ್ಕ ಪರಿಶೋದನೆ ಕುರಿತು ಬಾಕಿ ಇರುವ ಕಂಡಿಕೆಗಳನ್ನು ಅಡಹಾಕ್ ಕಮಿಟಿಯಲ್ಲಿ ಇತ್ಯರ್ಥಗೊಳಿಸಲು ತಾ.ಪಂ. ಇಒ ಗಳಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ, ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -spot_img

Most Popular

error: Content is protected !!