Thursday, October 16, 2025
Google search engine
Homeಜಿಲ್ಲಾಬೆಳಗಾವಿಯಲ್ಲಿ 50% ರಿಯಾಯತಿಯಡಿ ಕೇವಲ 9 ದಿನಕ್ಕೆ 11 ಲಕ್ಷ ರೂ. ಟ್ರಾಫಿಕ್‌ ದಂಡ ಪಾವತಿ.!
spot_img

ಬೆಳಗಾವಿಯಲ್ಲಿ 50% ರಿಯಾಯತಿಯಡಿ ಕೇವಲ 9 ದಿನಕ್ಕೆ 11 ಲಕ್ಷ ರೂ. ಟ್ರಾಫಿಕ್‌ ದಂಡ ಪಾವತಿ.!

ಬೆಳಗಾವಿ: ಕುಂದಾನಗರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ. 50ರಷ್ಟು ರಿಯಾಯಿತಿಯಡಿ ದಂಡ ಪಾವತಿಸಲು ರಾಜ್ಯ ಸರಕಾರವು ಅವಕಾಶ ಕಲ್ಪಿಸಿದ್ದು, ಕೇವಲ 9 ದಿನಗಳಲ್ಲಿ 5236 ಪ್ರಕರಣಗಳ ಸಂಭಂದಿಸಿದಂತೆ 11.89.200 ರೂ. ದಂಡ ಸಂಗ್ರಹವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ಸಂಚಾರ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡ ಪಾವತಿಸಲು ರಿಯಾಯಿತಿ ನೀಡಿ ಸರಕಾರವು ಆದೇಶಿಸಿತ್ತು. ಈ ಆದೇಶವು ಆ.23ರಿಂದ ಜಾರಿಗೆ ಬಂದಿದ್ದು ಸೆ.12ರ ವರೆಗೆ ರಿಯಾಯಿತಿ ಅಡಿ ದಂಡ ಪಾವತಿಸಬಹುದಾಗಿದೆ.

ದಂಡ ಪಾವತಿಸುವುದು ಹೇಗೆ? ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್‌ ಆ್ಯಪ್‌, ಬೆಳಗಾವಿ ಸಂಚಾರ ಪೊಲೀಸ್‌ ಅಥವಾ ಕರ್ನಾಟಕ ಒನ್‌ ವೆಬ್‌ಸೈಟ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ತಿಳಿದುಕೊಳ್ಳಬಹುದು. ಬಳಿಕ, ಪಾವತಿಸಲು ಇಚ್ಛಿಸುವ ದಂಡದ ಮೊತ್ತವನ್ನು ಆಯ್ಕೆ ಮಾಡಿದರೆ, ರಿಯಾಯಿತಿ ಮೊತ್ತದ ಪಾವತಿಯ ಆಯ್ಕೆ ಲಭ್ಯವಾಗುತ್ತದೆ. ನಂತರ, ದಂಡದ ಮೊತ್ತ ಪಾವತಿಸಬಹುದು.

ಶೇ. 50 ರಷ್ಟು ರಿಯಾಯಿತಿ: ಟ್ರಾಫಿಕ್‌ ನಿಯಮ ಉಲ್ಲಂಘಿಸಿದವರಿಗೆ ದಂಡದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ. ಹೆಲ್ಮೆಟ್‌ ಧರಿಸದಿರುವುದು, ನಿಗದಿತಕ್ಕಿಂತ ಹೆಚ್ಚು ಜನ ಬೈಕ್‌ ನಲ್ಲಿ ಪ್ರಯಾಣಿಸುವುದು, ಸಿಗ್ನಲ್‌ದಾಟುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗೆ ದಿನನಿತ್ಯ ಸಾವಿರಕ್ಕು ಹೆಚ್ಚು ಕೇಸ್‌ಗಳು ದಾಖಲಾಗುತ್ತಲೇ ಇರಿತ್ತದೆ. ಸದ್ಯ ಸಂಚಾರ ಇಲಾಖೆ ಹೊರಡಿಸಿರುವ ಈ ಆಫರ್‌ ಅನ್ನು ಬೈಕ್ ಹಾಗೂ ಇತರ ವಾಹನ ಸವಾರರು ಬಳಸಿಕೊಳ್ಳುತ್ತಿದ್ದಾರೆ. ಅದರ ಭಾಗವಾಗಿ ಇಂದಿಗೆ 9 ದಿನಗಳಲ್ಲಿ 11 ಲಕ್ಷ ರೂ.ದಂಡ ಸಂಗ್ರಹವಾಗಿದೆ ಎಂದು ಸಂಚಾರ ಪೊಲೀಸರೆ ತಿಳಿಸಿದ್ದಾರೆ.

ಯಾರೆಲ್ಲ ಪಾವತಿ ಮಾಡಬಹುದು? ಕರ್ನಾಟಕ ಸರ್ಕಾರದ ಶೇ. 50 ರಷ್ಟು ರಿಯಾಯಿತಿ ಸೌಲಭ್ಯವು 2023ರ ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸಂಚಾರ ಪೊಲೀಸರು ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಾ ವಾಹನ ಚಾಲಕರು ಈ ಸೀಮಿತ ಸಮಯದ ಅವಕಾಶವನ್ನು ಬಳಸಿಕೊಳ್ಳಲು ಮತ್ತು ತಮ್ಮ ವಾಹನಗಳ ಮೇಲಿರುವ ಸಂಚಾರ ಉಲ್ಲಂಘನೆಗಳ ಬಾಕಿ ಇರುವ ದಂಡಗಳನ್ನು ತ್ವರಿತವಾಗಿ ಪಾವತಿಸುವುದು. ಒಟ್ಟಾಗಿ, ಸಂಚಾರ ನಿಯಮ ಪಾಲಿಸಿ, ಸುರಕ್ಷಿತ ಮತ್ತು ಹೆಚ್ಚು ಜವಾಬ್ದಾರಿಯುತ ಬೆಳಗಾವಿನತ್ತ ಸಾಗೋಣ ಎಂದು ಬೆಳಗಾವಿ ಸಂಚಾರ ಪೊಲೀಸ್‌ ಎಸಿಪಿ ಜೆ. ಆರ್.‌ ನಿಖಂ ಅವರು ತಿಳಿಸಿದ್ದಾರೆ.

ವಾಹನ ಪಾರ್ಕಿಂಗ್‌ ಸರಿಯಾದ ಕ್ರಮದಲ್ಲಿರಲಿ: ಅನೇಕ ಸಂಖ್ಯೆಯಲ್ಲಿ ವಾಹನಗಳು, ಬೆಳಗಾವಿ ಪ್ರಮುಖ ರಸ್ತೆಗಳಲ್ಲಿ ತುಂಬಿ ತುಳುಕುತ್ತಿವೆ. ನಾವು ಕಟ್ಟುನಿಟ್ಟಾದ ಅಕ್ರಮ ಪಾರ್ಕಿಂಗ್ ದಂಡವನ್ನು ಜಾರಿಗೆ ತರುತ್ತಿದ್ದೇವೆ. ಇದರಿಂದ ನಿಮ್ಮ ಪ್ರಯಾಣ ಸುಗಮವಾಗಿರುತ್ತದೆ. ಜವಾಬ್ದಾರಿಯಿಂದ ಪಾರ್ಕ್ ಮಾಡಿ ಇಲ್ಲವೇ ದಂಡ ಪಾವತಿಸಿ ಎಂದು ಬೆಳಗಾವಿ ಸಂಚಾರ ಪೊಲೀಸ್‌ ಪಿಎಸ್‌ ಐ ಮಹಾಂತೇಶ ಮಠಪತಿ ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!