Wednesday, October 15, 2025
Google search engine
Homeಜಿಲ್ಲಾಆಕಾಶ್ ನಿಂದ 250 ಕೋಟಿ ಮೌಲ್ಯದ 100% ವರೆಗಿನ ವಿದ್ಯಾರ್ಥಿವೇತನ, 2.5 ಕೋಟಿ...
spot_img

ಆಕಾಶ್ ನಿಂದ 250 ಕೋಟಿ ಮೌಲ್ಯದ 100% ವರೆಗಿನ ವಿದ್ಯಾರ್ಥಿವೇತನ, 2.5 ಕೋಟಿ ಮೌಲ್ಯದ ನಗದು ಪ್ರಶಸ್ತಿ ಘೋಷಣೆ

ಆಕಾಶ್ ನಿಂದ   250 ಕೋಟಿ ಮೌಲ್ಯದ 100% ವರೆಗಿನ ವಿದ್ಯಾರ್ಥಿವೇತನ, 2.5 ಕೋಟಿ ಮೌಲ್ಯದ  ನಗದು ಪ್ರಶಸ್ತಿ ಘೋಷಣೆ

ಹುಬ್ಬಳ್ಳಿ : ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‍ಎಲ್) ಅಂಥೆ 2025 (ಆಕಾಶ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.ಅಂಥೆ 2025, 5 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಸವಾಲುಗಳನ್ನು ಮೀರಿ ಬೆಳೆಯಲು ಮತ್ತು ನಿಜವಾದ ಸಮಸ್ಯೆ ಪರಿಹಾರಕರಾಗಿ ಹೊರಹೊಮ್ಮಲು ಸಬಲೀಕರಣಗೊಳಿಸುವ ಗುರಿ ಹೊಂದಿದೆ.ಆಕಾಶ್ 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಆಕಾಶ್ ಇನ್ವಿಕ್ಟಸ್ ಜೆಇಇ ಅಡ್ವಾನ್ಸ್ಡ್ ತಯಾರಿ ಕಾರ್ಯಕ್ರಮಕ್ಕೆ ಪ್ರವೇಶಕ್ಕಾಗಿ ವಿದ್ಯಾರ್ಥಿವೇತನ ಪರೀಕ್ಷೆಯಾದ ಇನ್ವಿಕ್ಟಸ್ ಏಸ್ ಪರೀಕ್ಷೆಯನ್ನು ಸಹ ಪ್ರಾರಂಭಿಸುತ್ತಿದೆ. ರಾಷ್ಟ್ರೀಯ ಮಟ್ಟದ ಅರ್ಹತಾ-ಕಮ್-ವಿದ್ಯಾರ್ಥಿವೇತನ ಪರೀಕ್ಷೆಯನ್ನು ಸೆ.7, 2025 ರಂದು ನಡೆಸಲಾಗುವುದು.

ಆನ್‍ಲೈನ್ ಮತ್ತು ಆಫ್‍ಲೈನ್ ವಿಧಾನಗಳಲ್ಲಿ ಲಭ್ಯವಿರುವ ಮೂರು ಗಂಟೆಗಳ ಪರೀಕ್ಷೆಯು (ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ)300 ಅರ್ಜಿ ಶುಲ್ಕವನ್ನು ಹೊಂದಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ 100% ವರೆಗೆ ವಿದ್ಯಾರ್ಥಿವೇತನ ಮತ್ತು ಅತ್ಯಾಕರ್ಷಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ.ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ವ್ಯವಹಾರ ಮತ್ತು ಶೈಕ್ಷಣಿಕ ವಿಭಾಗದ ಮುಖ್ಯಸ್ಥ  ಧೀರಜ್ ಕುಮಾರ್ ಮಿಶ್ರಾ ಮಾತನಾಡಿ,ANTHE 2025  ಅರ್ಹ ವಿದ್ಯಾರ್ಥಿಗಳಿಗೆ ಸಂಪನ್ಮೂಲಗಳು, ಬೆಂಬಲ ಮತ್ತು ಪ್ರೇರಣೆಯನ್ನು ಒದಗಿಸುವ ಮೂಲಕ ಈ ಪರಂಪರೆ ಮುಂದುವರಿಸುತ್ತದೆ. ಗುಣಮಟ್ಟದ ಶಿಕ್ಷಣವನ್ನು ನಿಜವಾಗಿಯೂ ಸಮಗ್ರ ಮತ್ತು ಫಲಿತಾಂಶ-ಕೇಂದ್ರಿತವಾಗಿಸುತ್ತಿದ್ದೇವೆ ಎಂದರು.

ಅಂಥೆ  2025 ರ ಆನ್‍ಲೈನ್ ಮೋಡ್ ಅ. 4 ರಿಂದ 12, 2025 ರವರೆಗೆ ಲಭ್ಯವಿದೆ. ವಿದ್ಯಾರ್ಥಿಗಳು ಒಂದು ಗಂಟೆಯ ಸ್ಲಾಟ್ ಅನ್ನು ಆಯ್ಕೆ ಮಾಡುವ ಮೂಲಕ ತಮ್ಮ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆ ತೆಗೆದುಕೊಳ್ಳಬಹುದು. ಆಫ್‍ಲೈನ್ ಪರೀಕ್ಷೆಯನ್ನು ಅ.5 ಮತ್ತು 12 ರಂದು 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 415 ಕ್ಕೂ ಹೆಚ್ಚು ಆಕಾಶ್ ಕೇಂದ್ರಗಳಲ್ಲಿ ನಡೆಸಲಾಗುವುದು.ಅಂಥೆ 2025 ಗಾಗಿ ನೋಂದಣಿಗಳು ಈಗ ತೆರೆದಿವೆ. ವಿದ್ಯಾರ್ಥಿಗಳು https://anthe.aakash.ac.in/home ನಲ್ಲಿ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಹತ್ತಿರದ ಆಕಾಶ್ ಕೇಂದ್ರಕ್ಕೆ ಭೇಟಿ ನೀಡಬಹುದು.   ಆನ್‍ಲೈನ್ ಮತ್ತು ಆಫ್‍ಲೈನ್ ವಿಧಾನಗಳೆರಡಕ್ಕೂ ಪರೀಕ್ಷಾ ಶುಲ್ಕ ₹300. ಮೊದಲೇ ಅರ್ಜಿ ಸಲ್ಲಿಸುವವರಿಗೆ 50% ರಷ್ಟು ರಿಯಾಯಿತಿಯಿದೆ.

ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಅ.24, 2025 ರಂದು ಘೋಷಿಸಲಾಗುವುದು, ಆದರೆ VII ರಿಂದ IX ತರಗತಿಗಳ ಫಲಿತಾಂಶಗಳನ್ನು ಅ. 29, 2025 ರಂದು ಘೋಷಿಸಲಾಗುವುದು. V ಮತ್ತು VI  ನೇ ತರಗತಿಗಳ ಫಲಿತಾಂಶಗಳನ್ನು ನ. 1, 2025 ರಂದು ಘೋಷಿಸಲಾಗುವುದು. XI  ಮತ್ತು XII  ತರಗತಿಗಳ ಫಲಿತಾಂಶಗಳನ್ನು ನ.4, 2025 ರಂದು ಪ್ರಕಟಿಸಲಾಗುವುದು. ಫಲಿತಾಂಶಗಳು ಅಂಥೆ ವೆಬ್‍ಸೈಟ್‍ನಲ್ಲಿ ಲಭ್ಯವಿದೆ .ವೈದ್ಯಕೀಯ ಶಿಕ್ಷಣವನ್ನು ಬಯಸುವ 10ನೇ ತರಗತಿಯ ವಿದ್ಯಾರ್ಥಿಗಳಿಗೆ, ಪ್ರಶ್ನೆಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಮಾನಸಿಕ ಸಾಮಥ್ರ್ಯಗಳನ್ನು ಒಳಗೊಂಡಿವೆ. ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ, ಪ್ರಶ್ನೆಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಮಾನಸಿಕ ಸಾಮಥ್ರ್ಯ  ಒಳಗೊಂಡಿವೆ. ಅದೇ ರೀತಿ, NEET ಅನ್ನು ಗುರಿಯಾಗಿಟ್ಟುಕೊಳ್ಳುವ XI-XII  ತರಗತಿಯ ವಿದ್ಯಾರ್ಥಿಗಳಿಗೆ, ಪ್ರಶ್ನೆಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರವನ್ನು ಒಳಗೊಂಡಿವೆ, ಈ  ಪತ್ರಿಕಾಗೋಷ್ಠಿಯಲ್ಲಿ, ವಲಯ ಅಧಿಕಾರಿ ಅಮೀರ್ ಹುಸೇನ್, ಬ್ರಾಂಚ್ ಹೆಡ್ ಅನಿಲ್ ಕುಮಾರ್, ಎಎಸ್ಎಚ್ ಜುನೈದ್  ಉಜ್ಮನ್, ಡಿ.ರವಿಕುಮಾರ್, ಲಿಂಗಾರೆಡ್ಡಿ,ಟಿ.ವೆಂಕಟೇಶರಲು,  ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular

error: Content is protected !!