ಬೆಳಗಾವಿ: ಜಿಲ್ಲಾ ವಿಚಾರವಾಗಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾ ವಿಭಜನೆ ಮಾಡಬೇಕಾಗಿ ಬಂದರೆ ಅಥಣಿಯನ್ನೂ ಜಿಲ್ಲೆ ಮಾಡಬೇಕು. ಅಥಣಿಯನ್ನ ಜಿಲ್ಲೆಯನ್ನಾಗಿ ಮಾಡಬೇಕೆಂದು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಅಥಣಿ ಕೂಡ ಸಾಕಷ್ಟು ಅಭಿವೃದ್ಧಿ ಆಗಿದೆ ಅಥಣಿ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದು, ಬೆಳಗಾವಿ ಜಿಲ್ಲೆಯ ಕೊನೆಯ ಗಡಿ ನಮ್ಮ ಅಥಣಿ ತಾಲ್ಲೂಕು.ಅಥಣಿಯಿಂದ ಕೊಟ್ಟಲಗಿ ಗ್ರಾಮ 40ಕಿ.ಮೀ ಇದೆ. ಅಥಣಿಯಿಂದ ಬೆಳಗಾವಿ 190 ಕಿಮೀ ಇದೆ ನನ್ನ ಮತಕ್ಷೇತ್ರ ಮಹಾರಾಷ್ಟ್ರ, ವಿಜಯಪೂರ ಹೊಂದಿಕೊಂಡಿದೆ ಆಡಳಿತಾತ್ಮಕವಾಗಿ ಮಾತ್ರ ಬೆಳಗಾವಿ ಸಂಪರ್ಕ ಇದೆ ಎಂದರು.
ವ್ಯವಹಾರದ ವಿಚಾರವಾಗಿ ವಿಜಯಪುರ,ಮಹಾರಾಷ್ಟ್ರ ಸಂಪರ್ಕ ಹೊಂದಿದ್ದೇವೆ.ಅಥಣಿ ಜಿಲ್ಲೆ ಆಗದಿದ್ದರೆ ವಿಜಯಪುರಕ್ಕೆ ನಾವು ಸೇರ್ಪಡೆ ಆಗುತ್ತೇವೆ. ಅಥಣಿ ಜಿಲ್ಲೆ ಮಾಡದಿದ್ದರೆ ನಾವು ಬೆಳಗಾವಿಗೆ ಸೇರೊದಿಲ್ಲ ಎಂದು ಕುಮಠಳ್ಳಿ ಹೇಳಿದರು.
ಅಥಣಿ ಜನರ ಪರಿಸ್ಥಿತಿ ಸರ್ಕಾರ ಅರ್ಥ ಮಾಡಿಕ್ಕೊಳ್ಳಬೇಕು ನಮ್ಮದು ಸ್ಪಷ್ಟ ನಿಲುವಿದೆ ಹಾಗಾಗಿ ಅಥಣಿ ಜಿಲ್ಲೆ ಆಗಲೇಬೇಕು ಎಂದು ಮಹೇಶ ಕುಮಟಳ್ಳಿ ಹೇಳಿದರು.