ಬೆಳಗಾವಿ: ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆ ಆಗುತ್ತಿದೆ. ಇದರಿಂದ ಇಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಅದರಲ್ಲಿ ಬೆಳಗಾವಿ ಸಮೀಪದಲ್ಲೆ ಇರುವ ಕಿಟವಾಡ ಫಾಲ್ಸ್ ನಿಸರ್ಗ ಪ್ರಿಯರ ಸ್ವರ್ಗ ಎಂದರೂ ಅತಿಶಯೋಕ್ತಿ ಆಗದು.
ಸುತ್ತಲೂ ಹಚ್ಚ ಹಸಿರಿನ ಗುಡ್ಡ. ಗುಡ್ಡದಿಂದ ಹರಿದು ಬರುವ ನೀರು ಚೆಕ್ ಡ್ಯಾಮ್ನಲ್ಲಿ ಸಂಗ್ರಹವಾಗಿರುವುದು. ಅಲ್ಲಿಂದ ನಿಧಾನವಾಗಿ ಬಂದು ಬಳಿಕ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡಲು ಎರಡೂ ಕಣ್ಣು ಸಾಲದು. ಇದು ಕಿಟವಾಡ ಫಾಲ್ಸ್ ಜಲವೈಭವ. ಭಾನುವಾರ ವೀಕೆಂಡ್ ಹಿನ್ನೆಲೆ ಪ್ರವಾಸಿಗರ ದಂಡು ಇಲ್ಲಿಗೆ ಹರಿದು ಬಂದಿತ್ತು.
ಬೆಳಗಾವಿಯಿಂದ ಕೇವಲ 20 ಕಿ.ಮೀ. ಅಂತರದಲ್ಲಿದೆ ಈ ಕಿಟವಾಡ ಫಾಲ್ಸ್. ಇದು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲೂಕಿನಲ್ಲಿ ಬರುತ್ತದೆ. ಕಡಿದಾದ ಕಲ್ಲಿನ ನಡುವೆ ಹಾಲ್ನೊರೆಯಂತೆ ಹರಿದು ಬರುವ ಫಾಲ್ಸ್ ಕೆಳಗೆ ನಿಂತು ಯುವಕ – ಯುವತಿಯರು ಎಂಜಾಯ್ ಮಾಡಿದರು. ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇನ್ನೂ ಕೆಲ ಯುವಕರು ಚೆಕ್ ಡ್ಯಾಮ್ನಲ್ಲಿ ಈಜು ಹೊಡೆದು ಸಾಹಸ ಪ್ರದರ್ಶಿಸಿದರು.
ಬೆಳಗಾವಿಯಿಂದ ಕಂಗ್ರಾಳಿ ಕೆಎಚ್, ಅಲತವಾಡ ಕ್ರಾಸ್, ಅಗಸಗಿ, ಚಲುವೇನಹಟ್ಟಿ, ಹಂದಿಗನೂರು ಮಾರ್ಗವಾಗಿ ಕಿಟವಾಡ ಫಾಲ್ಸ್ಗೆ ಹೋಗಬೇಕಾಗುತ್ತದೆ. ಹಂದಿಗನೂರು ಕರ್ನಾಟಕದ ಕೊನೆ ಗ್ರಾಮ. ಹಂದಿಗನೂರಿನಿಂದ ಕೇವಲ 5 ಕಿ.ಮೀ. ಅಂತರದಲ್ಲಿ ಈ ಕಿಟವಾಡ ಫಾಲ್ಸ್ ಇದೆ. ಕುಂದಾನಗರಿ ಮಂದಿಗಂತೂ ಕೇವಲ ಅರ್ಧ ಗಂಟೆ ಪ್ರಯಾಣ.
ಮಾತನಾಡಿದ ಪ್ರವಾಸಿಗರಾದ ಗೀತಾಂಜಲಿ ಘೋರ್ಪಡೆ ಮಾತನಾಡಿ, ನಮ್ಮ ಯಜಮಾನರು ಸೌದಿಯಲ್ಲಿ ಸಿವಿಲ್ ಇಂಜಿನಿಯರ್ ಇದ್ದಾರೆ. ರಜೆ ಇದ್ದಿದ್ದರಿಂದ ನಮ್ಮೂರು ಬೆಳಗಾವಿಗೆ ಬಂದಿದ್ದೇವೆ. ಸೌದಿಯಲ್ಲಿ ಫಾಲ್ಸ್, ಹಸಿರು ಗುಡ್ಡ, ಇಷ್ಟು ಒಳ್ಳೆಯ ವಾತಾವರಣ ನೋಡಲು ಸಿಗುವುದಿಲ್ಲ. ಅಲ್ಲಿ ಮರಳು ಅಷ್ಟೇ ನೋಡಬೇಕು. ಇಲ್ಲಿ ಇದೆಲ್ಲಾ ವೀಕ್ಷಿಸಿ ಮನಸ್ಸಿಗೆ ತುಂಬಾ ಖುಷಿ ಆಗುತ್ತಿದೆ. ಇನ್ನು ನಮ್ಮ ಮಕ್ಕಳು ನಮ್ಮೂರು, ನಮ್ಮ ಇಂಡಿಯಾ ನೋಡಿ ಹರ್ಷಿತರಾಗಿದ್ದಾರೆ. ಕುಟುಂಬ ಸಮೇತರಾಗಿ ಮಸ್ತ್ ಮಜಾ ಮಾಡುತ್ತಿದ್ದೇವೆ ಎಂದರು.
ಬೆಳಗಾವಿಯಲ್ಲಿ ನಾವು 20 ವರ್ಷಗಳಿಂದ ವಾಸವಿದ್ದೇವೆ. ಆದರೆ, ಬೆಳಗಾವಿ ಸಮೀಪದಲ್ಲಿ ಇಷ್ಟೊಂದು ಒಳ್ಳೆಯ ಫಾಲ್ಸ್ ಇದೆ ಅಂತಾ ನಮಗೆ ಗೊತ್ತೇ ಇರಲಿಲ್ಲ. ಅಲ್ಲದೇ ಅಂಬೋಲಿ ಸೇರಿ ಬೇರೆ ಫಾಲ್ಸ್ಗಳಿಗೆ ಹೋಲಿಸಿದರೆ ಇದು ತುಂಬಾ ಸೇಫ್ ಆಗಿದೆ. ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ಪ್ರಚಾರ ಸಿಗಬೇಕಿದೆ. ಮನೆಯವರೆಲ್ಲ ಕೂಡಿಕೊಂಡು ಬಂದು ಎಂಜಾಯ್ ಮಾಡಬಹುದು ಎನ್ನುತ್ತಾರೆ ಪ್ರವಾಸಿಗ ಸುನೀಲ್ ಭೋಸಲೆ.
ಪ್ರಿಯಾಂಕಾ ಪ್ರವೀಣ ಕುಂಬಾರ ದಂಪತಿ ಮಾತನಾಡಿ, ಇಂದು ರಜೆ ಇತ್ತು. ಹಾಗಾಗಿ, ಮಗನ ಜೊತೆಗೆ ಕಿಟವಾಡ ಫಾಲ್ಸ್ ಗೆ ಬಂದಿದ್ದೇವೆ. ಇಲ್ಲಿನ ವಾತಾವರಣ ನಮಗೆ ತುಂಬಾ ಹಿಡಿಸಿತು. ಕುಟುಂಬ ಸಮೇತರಾಗಿ ಬರಲು ಹೇಳಿ ಮಾಡಿಸಿದ ಸ್ಥಳವಿದು. ಎಲ್ಲರೂ ಬಂದು ಸೇಫ್ ಆಗಿ ಇಲ್ಲಿನ ವಾತಾವರಣ ಎಂಜಾಯ್ ಮಾಡಿ ಹೋಗಬಹುದು ಎಂದು ಅಭಿಪ್ರಾಯಪಟ್ಟರು.
ಕಿಟವಾಡ ಫಾಲ್ಸ್ನಲ್ಲಿ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು ಫಾಲ್ಸ್ ಕೆಳಗೆ ಹೋಗಲು ಬೇಕಿದೆ ಮೆಟ್ಟಿಲು: ಫಾಲ್ಸ್ ಕೆಳಗೆ ಹೋಗಲು ಪ್ರವಾಸಿಗರು ಹರಸಾಹಸ ಪಡುವ ಸ್ಥಿತಿಯಿದೆ. ಅಲ್ಲದೇ ಕಾಲು ಜಾರಿ ಬಿದ್ದು ಗಾಯವಾಗುವ ಸಾಧ್ಯತೆಯೂ ಹೆಚ್ಚಿದೆ. ಮೆಟ್ಟಿಲು ವ್ಯವಸ್ಥೆ ಮಾಡಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲ ಆಗಲಿದೆ. ಮೆಟ್ಟಿಲು ಇಲ್ಲದ್ದರಿಂದ ಅದೇಷ್ಟೋ ಮಂದಿ ಮೇಲಿನಿಂದಲೇ ಫಾಲ್ಸ್ ನೋಡಿ ಬೇಸರದಿಂದ ಹೋಗುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೇ ಫಾಲ್ಸ್ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಆದರೆ, ಯಾವುದೇ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿಲ್ಲ ಎಂಬುದು ಪ್ರವಾಸಿಗರ ದೂರು

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 4;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 36;
ಸುರಕ್ಷಿತ ಅಂತರ ಇರಲಿ: ಕಿಟವಾಡ ಫಾಲ್ಸ್ ಮೇಲಿನಿಂದ ವೀಕ್ಷಿಸುವಾಗ ಕಾಲು ಜಾರಿ ಬಿದ್ದು ಅನೇಕರು ಜೀವ ಕಳೆದುಕೊಂಡಿದ್ದಾರೆ. ಹಾಗಾಗಿ, ಸುರಕ್ಷಿತ ಅಂತರ ಕಾಪಾಡುವುದು ಒಳ್ಳೆಯದು. ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ಜೀವ ಕಳೆದುಕೊಂಡರೆ ನಿಮ್ಮ ಜೀವಕ್ಕೆ ನೀವೆ ಹೊಣೆ ಎಂಬುದನ್ನು ಯಾರೂ ಮರೆಯಬಾರದು.