ಬೆಳಗಾವಿ : ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ವಿಭಜನೆ ಡಿಸೆಂಬರ್ 30 2025ರ ಒಳಗಾಗಿ ಜಿಲ್ಲಾ ವಿಭಜನೆ ರಾಜ್ಯ ಸರಕಾರ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದರು ನೂತನ ಜಿಲ್ಲೆಯ ರಚನೆಗೆ 2025ರ ಡಿಸೆಂಬರ್ 31ರೊಳಗಾಗಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಬೇಕು ಎಂದು ಹೇಳಿದರು.
ಕೇಂದ್ರ ಸರಕಾರ 2026ರಿಂದ ಜಾತಿ ಗಣತಿ ಮಾಡಲು ನಿರ್ಧರಿಸಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಹೊಸ ಜಿಲ್ಲೆ ಘೋಷಣೆ ಮಾಡಲು ಕೇಂದ್ರ ಸಚಿವಾಲಯ ಸೂಚನೆ ನೀಡಿದೆ. ಬೆಳಗಾವಿ ಜಿಲ್ಲೆ ಆಡಳಿತಾತ್ಮಕ ದೃಷ್ಟಿಯಿಂದ ನಲುಗಿ ಹೋಗಿದೆ. ಅಧಿಕಾರಿಗಳಿಗೆ ದೊಡ್ಡ ಜಿಲ್ಲೆಯಾಗಿರುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ವಾದುದೇವ ಸಮಿತಿ, ಹುಂಡೇಕರ್ ಆಯೋಗ, ಪಿ.ಸಿ.ಗದ್ದಿಗೌಡರ, ಎಂ.ಪಿ.ಪ್ರಕಾಶ ಆಯೋಗಗಳನ್ನು ಸರಕಾರ ರಚನೆ ಮಾಡಿದ್ದವು. ಈ ಆಯೋಗ ನೀಡಿರುವ ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದರು.