ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಗಾಳಿ ಮಳೆಗೆ ಅನೇಕ ಅವಾಂತರಗಳು ಆಗಿವೆ. ಈ ಮಧ್ಯೆ ಹೊಟೇಲ್ ಮುಂದೆ ನಿಲ್ಲಿಸಿದ ಕಾರ್ ಗಳ ಮೇಲೆ ಏಕಾಏಕಿ ಬೃಹತ್ ಮರದ ಕೊಂಬೆ ಬಿದ್ದು ತಪ್ಪಿದ ಭಾರಿ ಅನಾಹುತ.
ಬೆಳಗಾವಿ ನಗರದ ಹೊರ ವಲಯದಲ್ಲಿ ಇರುವ ಉಚಗಾಂವ್ ರಸ್ತೆಯಲ್ಲಿರುವ ಹೋಟೆಲ್ ಮುಂದೆ ನಿಲ್ಲಿದ ಎರಡು ಐಶಾರಾಮಿ ಕಾರುಗಳ ಮೇಲೆ ಬೃಹತ್ ಮರದ ಕೊಂಬೆ ಬಿದ್ದಿದೆ. ಇದರ ಪರಿಣಾಮ ಕಾರುಳ ಗಾಜು ಪುಡಿ ಪುಡಿಯಾಗಿದೆ. ಸದ್ಯ ಘಟನೆ ವೇಳೆ ಕಾರಿನಲ್ಲಿ ಪ್ರಯಾಣಿಕರು ಇರಲಿಲ್ಲ. ಆ ಕಾರಣದಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಕಾರುಗಳ ಮೇಲೆ ಮರದ ಕೊಂಬೆ ಬಿದ್ದಿದ್ದರಿಂದ ಉಚಗಾಂವ್ ರಸ್ತೆಯಲ್ಲಿ ಕೆಲ ಕಾಲ ವಾಹನ ದಟ್ಟಣೆ ಉಂಟಾಗಿತ್ತು.