ಬೈಲಹೊಂಗಲ : ತಾಲೂಕಿನ ನಯಾನಗರ ಗ್ರಾಮದ ಮಲಫ್ರಭಾ ಸೇತುವೆ ಹತ್ತಿರ ವಾಹನ ಸವಾರ ಪದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೊರ್ವ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಕೆಂಗಾನೂರ ಗ್ರಾಮದ ಅಶೋಕ ಯಲ್ಲಪ್ಪ ಕಿತ್ತೂರು (60) ಮೃತ ವ್ಯಕ್ತಿ. ಉಡಿಕೇರಿ ಗ್ರಾಮದ ಸಿದ್ದು ಈರಪ್ಪ ಕುರಿ (26) ಗಾಯಾಳು. ಸಿದ್ದು ಹೊಸೂರ ಗ್ರಾಮದಿಂದ ಉಡಿಕೇರಿ ಗ್ರಾಮಕ್ಕೆ ತೆರಳುವ ಮಾರ್ಗ ಮದ್ಯ ನಯಾನಗರ ಸೇತುವೆ ಬಳಿ ಅಶೋಕ ಈತನು ಮನೆಗೆ ತೆರಳುವಾಗ ಈ ಘಟನೆ ನಡೆದಿದೆ.
ಗಾಯಳುವನ್ನು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಅಶೋಕ ಮೃತಪಟ್ಟಿದ್ದಾನೆ. ಸಿದ್ದು ಕುರಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.”