Thursday, October 16, 2025
Google search engine
Homeಜಿಲ್ಲಾನಿರಂತರ ಮಳೆಯಿಂದ ಮನೆಯ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಸಾವು
spot_img

ನಿರಂತರ ಮಳೆಯಿಂದ ಮನೆಯ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಸಾವು

ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಲವು ಅವಾಂತರ ಸೃಷ್ಟಿಸುತ್ತಿದೆ. ಮನೆಯ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಗೋಕಾಕ್ ನಗರದ ಮಹಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ.

ಕೀರ್ತಿಕಾ ನಾಗೇಶ್ ಪೂಜಾರಿ(3) ಮೃತ ಬಾಲಕಿ.ಪಕ್ಕದ ಮನೆಯ ಗೋಡೆ ನಾಗೇಶ್​ ಅವರ ಮನೆ ಮೇಲೆ ಬಿದ್ದು ಅವಘಡ ಸಂಭವಿಸಿದೆ. ಗೋಡೆ ಕುಸಿದು ಬಿದ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಮೃತ ಕೀರ್ತಿಕಾ ಅಕ್ಕ ನಾಲ್ಕು ವರ್ಷದ ಖುಷಿಗೂ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯ ಒಂದು ರೂಮಿನಲ್ಲಿ ಅಕ್ಕ, ತಂಗಿ ಮಲಗಿದರೆ, ಮತ್ತೊಂದು ರೂಮಿನಲ್ಲಿ ಪೋಷಕರು ಮಲಗಿದ್ದರು. ಬೆಳಗಿನ ಜಾವ ಮನೆಯ ಒಂದು ಭಾಗದ ಗೋಡೆ ಕುಸಿದು ದುರ್ಘಟನೆ ನಡೆದಿದೆ. ಸ್ಥಳಕ್ಕೆ ಗೋಕಾಕ್ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತದೇಹವನ್ನು ಗೋಕಾಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಗಳನ್ನು ಕಳೆದುಕೊಂಡ ತಂದೆ – ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೋಕಾಕ್ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -spot_img

Most Popular

error: Content is protected !!