Wednesday, June 18, 2025
Google search engine
Homeಕ್ರೈಂಭೀಕರ ರಸ್ತೆ ಅಪಘಾತ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು
spot_img

ಭೀಕರ ರಸ್ತೆ ಅಪಘಾತ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿ ಸೋಮವಾರ ಸಂಜೆ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಮಭವಿಸಿದ್ದು, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ.

ಹಿರೇಬಾಗೇವಾಡಿ ಗ್ರಾಮದ ಅನಿಸ್‌ ಮುಸ್ತಾಕ ಸೈಯದ್‌ (ಕಾರ್‌ ಚಾಲಕ– 30), ಇವರ ಪತ್ನಿ ಅಯಿಮಾನ ಅನಿಸ್‌ ಸೈಯದ್‌ (24) ಇವರಿಬ್ಬರ ಮಗು ಅಹ್ಮದ್‌ ಅನಿಸ್‌ ಸೈಯದ್‌ (1.5) ಮೃತಪಟ್ಟವರು. ಅನಿಸ್‌ ಅವರ ಹಸೋದರಿ ಆಯಿಷಾ ಅನ್ವರ ಸೈಯದ್‌ ತೀವ್ರ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಐವರು ಕಾರಿನಲ್ಲಿ ಗೋಕಾಕದಿಂದ ಹಿರೇಬಾಗೇವಾಡಿ ಕಡೆಗೆ ಬರುತ್ತಿದ್ದರು. ಆಗ ಎದುರಿಗೆ ಎರಡು ಕಾರುಗಳು ಬರುತ್ತಿದ್ದವು. ಒಂದು ಕಾರು ಇನ್ನೊಂದನ್ನು ಹಿಂದಿಕ್ಕುವ ಭರದಲ್ಲಿ ಮೃತರ ಕಾರಿಗೆ ನೇರವಾಗಿ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ಕಾರಿನಲ್ಲಿ ಸವದತ್ತಿ ಪರಸಗಡ ಕ್ಷೇತ್ರದ ಮಾಜಿ ಶಾಸಕ ಆರ್‌.ವಿ. ಪಾಟೀಲ ಅವರ ಕಾರು ಎಂದು ಬರೆದ ಪತ್ರ ಸಿಕ್ಕಿದೆ. ಇದರಲ್ಲಿದ್ದ ಮಾಜಿ ಶಾಸಕರ ಪುತ್ರ ಹಾಗೂ ಇನ್ನೊಬ್ಬ ಸವಾರನಿಗೂ ಗಾಯಗಳಾಗಿವೆ.

ಡಿಕ್ಕಿ ರಭಸಕ್ಕೆ ಅನಿಸ್‌ ಅವರ ಕಾರು ದೂರ ಚಿಮ್ಮಿ ರಸ್ತೆ ಬದಿಯ ಹೊಲದಲ್ಲಿ ಬಿದ್ದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಧಾವಿಸಿದ ಜನ ಶವಗಳನ್ನು ಹೊರತೆಗೆಯಲು ಸಹಕರಿಸಿದರು. ಹಿರೇಬಾಗೇವಾಡಿ ಮತ್ತು ಬೈಲಹೊಂಗಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.‘

RELATED ARTICLES
- Advertisment -spot_img

Most Popular

error: Content is protected !!