ಬೈಲಹೊಂಗಲ: ಪಂಜಾಬಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೈಲಹೊಂಗಲದ ತಿರಂಗಾ ಕರಾಟೆ ಅಕಾಡೆಮಿ ಕರಾಟೆ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಭರ್ಜರಿ ಪದಕ ಬೇಟೆಯಾಡಿದ್ದಾರೆ.
ಪಂಜಾಬ್ ರಾಜ್ಯದ ಕಪುರ್ಥಾಲಾ ಜಿಲ್ಲೆಯ ಸುಲ್ತಾನಪುರ ಲೋಧಿಯಲ್ಲಿ ಇದೇ ಏಪ್ರೀಲ್ 25-27ರವರೆಗೆ ಆಲ್ ಗೋಜು ಆರ್.ವಾಯ್.ಯು. ಕರಾಟೆ ಫೆಡರೇಷನ್ ಆಫ್ ಇಂಡಿಯಾ, ಕರಾಟೆ ಇಂಡಿಯಾ ಆರ್ಗನೈಜೇಷನ್, ವರ್ಡ್ಲ್ ಗೋಜು ಆರ್.ವಾಯ್.ಯು. ಕರಾಟೆ ಯೂನಿಯನ್ ಹಾಗೂ ಏಷಿಯನ್ ಗೋಜು ಆರ್.ವಾಯ್.ಯು. ಕರಾಟೆ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ 2ನೇ ಆಲ್ ಗೋಜು ಆರ್.ವಾಯ್.ಯು. ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೈಲಹೊಂಗಲದ ತಿರಂಗಾ ಕರಾಟೆ ಅಕಾಡೆಮಿ 16 ಕರಾಟೆ ಪಟುಗಳು 6 ಬಂಗಾರ, 6 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನು ಗೆದ್ದು ಸಾಧನೆ ಮೆರೆದಿದ್ದಾರೆ.
ನಕ್ಷ ಮೆಟ್ಯಾಲ್ 2 ಚಿನ್ನ, ಪ್ರಣವ್ ಅಂಗಡಿ 1 ಚಿನ್ನ-1 ಕಂಚು, ನಿಕೇತನ್ 1 ಚಿನ್ನ, ಕಾರ್ತಿಕೇಯ್ ಎಸ್ 1 ಕಂಚು-1 ಬೆಳ್ಳಿ, ಆಹನ್ ಸಾಧುನವರ 2 ಕಂಚು, ವಿಧಿ ಭಟ್ 1 ಚಿನ್ನ, ಕರಣ್ ಶ್ರೇಷ್ಠಾ 1 ಬೆಳ್ಳಿ, ಸುಬ್ರಮಣ್ಯ ಎಚ್ 1 ಕಂಚು, ಯುಕ್ತಿ ಹೊಸುರ 1 ಬೆಳ್ಳಿ, ಪ್ರಣದ್ ಜಿ 1 ಬೆಳ್ಳಿ, ಪ್ರಣವ್ ಜಿ 1 ಕಂಚು, ಸಿದ್ಧಾರೂಢ ಮೇಟ್ಯಾಲ್ 1 ಕಂಚು, ಜ್ಯೋತಿ 1 ಬೆಳ್ಳಿ, ನಂದನ್ 1 ಕಂಚು, ಭುವನ್ ಹೊಳಿ 1 ಕಂಚು, ಅಕ್ಷಯ್ ಮೇಟ್ಯಾಲ್ 1 ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಕರಾಟೆ ಪಟುಗಳಿಗೆ ಸುಹಾಸ ಒಕ್ಕುಂದ ಹಾಗೂ ಮಂಜು ಸುಣಗಾರ ತರಬೇತಿ ನೀಡಿದ್ದಾರೆ. ಮಕ್ಕಳ ಸಾಧನೆಗೆ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.