ಬೆಳಗಾವಿ: ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ, ಶ್ರೀ ದುರ್ಗಾದೇವಿ ಹಾಗೂ ಶ್ರೀ ಮಸಣಾದೇವಿಯರ ಜಾತ್ರಾ ಮಹೋತ್ಸವ ದಿ. 22 04 2024 ರಿಂದ ದಿ. 30 ವರೆಗೆ 9 ದಿನಗಳ ಕಾಲ ನಡೆಯಲ್ಲಿದೆ ಎಂದು ನೀಲಿಜಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಶಾಪುಕರ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಗಳವಾರ 22 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಮಹಾಲಕ್ಷ್ಮೀ ದೇವಿಯ ಮಂದಿರ ಉದ್ಘಾಟನೆ.
ಪರಮಪೂಜ್ಯ ಶ್ರೀ ನಾಗಯ್ಯ ಮಹಾಸ್ವಾಮಿಗಳು, ಬಡಕೊಳ್ಳಮಠ, ತಾರಿಹಾಳ, ಪರಮಪೂಜ್ಯ ಶ್ರೀ ರುದ್ರಯ್ಯ ಮಹಾಸ್ವಾಮಿಗಳು, ಶರಣಮಟ್ಟಿ ಅವರು ದಿವ್ಯಸಾನಿಧ್ಯ
ವಹಿಸಲಿದ್ದಾರೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಉದ್ಘಾಟಕರಾಗಿ ಆಗಮಿಸಲಿದ್ದಾರೆ ಎಂದರು.
ಬೆಳಿಗ್ಗೆ 9.35 ಗಂಟೆಗೆ ವೃಷಭಲಗ್ನ ಮುಹೂರ್ತದಲ್ಲಿ ಗ್ರಾಮದ ದೈವದವರಿಂದ ಶ್ರೀ ದೇವಿಯ ಉಡಿ ತುಂಬುವ ಕಾರ್ಯಕ್ರಮ ಸಂಜೆ 4. ಗಂಟೆಗೆ ಶ್ರೀ ದೇವಿಯನ್ನು ಹೊನ್ನಾಟದೊಂದಿಗೆ ರಥದಲ್ಲಿ ಕೂಡಿಸುವುದು, ಹಾಗೂ ರಾತ್ರಿ 8.ಗಂಟೆಗೆ ಬೆಳಗಾವಿಯ ಭಾರತೀಯ ಗಾಯನ ಸಮಾಜದ ಮಹಿಳೆಯರಿಂದ ಭಜನೆ ನಡೆಯಲಿವೆ.
ದಿ.23 ರಂದು ಬೆಳಿಗ್ಗೆ 8 ಗಂಟೆಗೆ ಸಕಲ ವಾದ್ಯ ವೃಂದದೊಡಗೂಡಿ ಸಂಭ್ರಮದ ರಥೋತ್ಸವ ನಡೆಯಲ್ಲಿದೆ
ಬೆಳಗಾವಿ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಕಾರಂಜಿಮಠ. ಹುಕ್ಕೇರಿ-ಬೆಳಗಾವಿ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡಲಿದ್ದಾರೆ. ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಗಮಿಸಲಿದ್ದಾರೆ. ಸಂಜೆ ಶ್ರೀ ಮಹಾಲಕ್ಷ್ಮೀದೇವಿಯು ರಥದೊಳಗಿಂದ ಇಳಿದು ಹೊನ್ನಾಟ ಆಡಿ ಗದ್ದುಗೆ ಮೇಲೆ ವಿರಾಜಮಾನ ರಾತ್ರಿ 9 ಗಂಟೆಗೆ ಬೆಳಗಾವಿಯ ಸಮೃದ್ಧ ಸಂಸ್ಥೆಯ ಅಂಧ-ಅಂಗವಿಕಲ ವಿದ್ಯಾರ್ಥಿಗಳಿಂದ ರಸಮಂಜರಿ-ಅರ್ಹಸ್ಟ್ರಾ ಕಾರ್ಯಕ್ರಮ ನಡೆಯಲಿವೆ.
24 ರಂದು ಗ್ರಾಮಸ್ಥರಿಂದ ಹಾಗೂ ಸದ್ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ವಿಶೇಷ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಗಮಿಸಲಿದ್ದಾರೆ.
ರಾತ್ರಿ 10 ಗಂಟೆಗೆ ಶಿಂದೊಳ್ಳಿ ಗ್ರಾಮದ ಕಲಾವಿದರಿಂದ ನಾಟಕ-‘ಗರುಡ ರಾಜ್ಯದಲ್ಲಿ ಘಟಸರ್ಪ ನಡೆಯುತ್ತವೆ.
ದಿ. 25 ರಂದು ಗ್ರಾಮಸ್ಥರಿಂದ ಹಾಗೂ ಸದ್ದಕ್ತರಿಂದ ಉಡಿ ತುಂಬುವ ಕಾರ್ಯಕ್ರಮ ಜತೆಗೆ ಮುಂಜಾನೆ 8 ಗಂಟೆಗೆ ಊರ ದೈವದವರಿಂದ ಶ್ರೀ ದುರ್ಗಾದೇವಿ ಹಾಗೂ ಶ್ರೀ ಮಸಣಾದೇವಿಯರ ಉಡಿ ತುಂಬುವುದು ಕಾರ್ಯಮಕ ನಡೆಯುತ್ತವೆ .
ಸಂಜೆ 4 ಗಂಟೆಗೆ ವಿಶೇಷ ಸಮಾರಂಭದ ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಉಸ್ತುವರಿ ಸಚಿವರಾದ ಸತೀಶ ಜಾರಕಿಹೊಳಿ ಆಗಮಿಸಲಿದ್ದಾರೆ.
ರಾತ್ರಿ 9 ಗಂಟೆಗೆ :ಹಾಸ್ಯ ಕಾರ್ಯಕ್ರಮ :ಕಲಾವಿದರು – ಪ್ರೊ. ಜಿ. ಕೆ. ಕುಲಕರ್ಣಿ, ಶ್ರೀ ಎಂ.ಬಿ. ಹೂಸಲ್ಲಿ, ಜಿ.ಎಸ್. ಸೋನಾರ ಕಾರ್ಯಕ್ರಮ ನಡೆಯುತ್ತವೆ .ಶನಿವಾರ 26 ರಿಂದ 30 ವರೆಗೆ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಮ ನಡೆಲಿವೆ ಎಂದು ಸತೀಶ್ ಶಾಪುಕರ್ ಹೇಳಿದರು.