ಖಾನಾಪೂರ: ಖಾನಾಪೂರ ತಾಲೂಕಿನ ಬಾಲೋಗಾ ಗ್ರಾಮದ ಶಿವನಗೌಡ ಈರನಗೌಡ ಪಾಟೀಲ್ (48 ವರ್ಷ ) ಇವರು ಏ. 1, 2025 ರಂದು ರಾತ್ರಿ ನಡುವಿನ ವೇಳೆ ಖಾನಾಪೂರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ಕೊಲೆ ನಡೆದಿದೆ. ಅವರ ಸಹೋದರ ಸಣ್ಣಗೌಡ ಪಾಟೀಲ್ ಅವರು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಮಂಗಳವಾರ ತನ್ನ ಹೆಂಡತಿ ಮತ್ತು ಸಂಬಂಧಿಕರಿಗೆ ಬಲೋಗಕ್ಕೆ ಗ್ರಾಮಕ್ಕೆ ಹೋಗುತ್ತೇನೆ ಎಂದು ಹೇಳಿ ಹೋಗಿದನು . ಆದರೆ ಆ ವ್ಯಕ್ತಿ ಅಲ್ಲಿಯೂ ಹೋಗದೆ ಮನೆಗೂ ಬಾರದೆ ಬೆಳಿಗ್ಗೆ ವೇಳೆಯಲ್ಲಿ ಕೊಲೆಯಾದ ಮಾಹಿತಿ ತಿಳಿದುಬಂದಿತು.
ಅಪರಿಚಿತ ಆರೋಪಿಗಳು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ. ಖಾನಾಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಖಾನಾಪೂರ ಪೊಲೀಸ್ ಠಾಣೆಯ ಪಿಐ ಎಲ್.ಎಚ್. ಗೌಂಡಿ ಮತ್ತು ಪಿಎಸ್‌ಐ ಎಂ.ಬಿ. ಬಿರಾದಾರ್ ಅವರು ಕಾರ್ಯಾಚರಣೆ ಕೈಗೊಂಡಿದಾರೆ.