,: ಘಟಪ್ರಭಾ: ಇವತ್ತು ಕರ್ನಾಟಕ ಬಂದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಘಟಪ್ರಭಾ ಮೃತ್ಯುಂಜಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಮೃತ್ಯುಂಜಯ ವೃತ್ತದಲ್ಲಿ ಸೇರಿದ ಕನ್ನಡ ಕಾರ್ಯಕರ್ತರು ಎಂಇಎಸ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ. ಎಂಇಎಸ್ ನಿಷೇಧಿಸಲು ಆಗ್ರಹಿಸಿ ಕೆಲ ಸಮಯ ಹೆದ್ದಾರಿ ತಡೆದು ಕೊನೆಗೆ ಘಟಪ್ರಭಾ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಮೂಲಕ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣಾ ಚೌಕಾಶಿ ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ ಜಿಲ್ಲಾಧ್ಯಕ್ಷರು ಶ್ರೀ ರೆಹಮಾನ್ ಮೊಕಾಶಿ ಕನ್ನಡ ಸೇನೆ ತಾಲ್ಲೂಕು ಅದ್ಯಕ್ಷ ಅಪ್ಪಾಸಾಬ ಮುಲ್ಲಾ ಕರವೇ ಅರಳಿಕಟ್ಟಿ ಬಣದ ರಾಜ್ಯದ್ಯಕ್ಷ ಪ್ರಶಾಂತ ಅರಳಿಕಟ್ಟಿ ಕರವೇ ತಾಲ್ಲೂಕು ಅದ್ಯಕ್ಷ ರವಿ ನಾವಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು