ಬೆಳಗಾವಿ: ಸಾವಗಾಂವ ಗ್ರಾಮದ ಸುತ್ತಮುತ್ತ, ಅಂಗಡಿ ಕಾಲೇಜು ಹಾಗೂ ಡ್ಯಾಮ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆ ತಡೆಯಬೇಕೆಂದು ಆಗ್ರಹಿಸಿ ಇಲ್ಲಿನ ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬೇರೆ ಕಡೆಯಿಂದ ಬಂದ ವಿದ್ಯಾರ್ಥಿಗಳು ಸಾವಗಾಂವ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರಾಯಿ, ಗಾಂಜಾ, ಸಿಗರೆಟ್ ಸೇದಿ ಅಕ್ರಮ ಚಟುವಟಿಕೆ ನಡೆಸಿದ್ದಾರೆ.
ಗ್ರಾಮದ ಮಹಿಳೆಯರು ಓಡಾಡುವ ಪರಿಸ್ಥಿತಿ ದುಸ್ತರವಾಗಿದೆ. ಇದರಿಂದ ಸಾರ್ವಜನರಿಗೆ ಮುಜುಗರ ಉಂಟಾಗುತ್ತದೆ.ವಿದ್ಯಾರ್ಥಿಗಳಿಂದ ಈ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಅಂಗಡಿ ಕಾಲೇಜು ಆಡಳಿತ ಮಂಡಳಿಗೆ ಹೇಳಿ ಈ ಅಕ್ರಮ ತಡಯಬೇಕೆಂದು ಮನವಿಯಲ್ಲಿ ಒತ್ತಾಯಿದ್ದಾರೆ..
ಪ್ರತಿಭಟನೆಯಲ್ಲಿ ಸಾವಗಾಂವ ಗ್ರಾಮಸ್ಥರು ಉಪಸ್ಥಿತರಿದ್ದರು.