Tuesday, April 29, 2025
Google search engine
Homeಜಿಲ್ಲಾಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕೈ-ಬರಹ ಉತಾರಗಳನ್ನು ನೀಡದಂತೆ ಕಟ್ಟುನಿಟ್ಟಿನ ಸೂಚನೆ; ಸಿಇಓ...
spot_img

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕೈ-ಬರಹ ಉತಾರಗಳನ್ನು ನೀಡದಂತೆ ಕಟ್ಟುನಿಟ್ಟಿನ ಸೂಚನೆ; ಸಿಇಓ ರಾಹುಲ್ ಶಿಂಧೆ

ಬೆಳಗಾವಿ: ಗ್ರಾಮ ಪಂಚಾಯತಿಗಳ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ-9, ನಮೂನೆ-11ಎ ಮತ್ತು ನಮೂನೆ-11ಬಿ ಇ-ಸ್ವತ್ತು ತಂತ್ರಾಂಶದ ಮೂಲಕ ಮಾತ್ರ ವಿತರಿಸತಕ್ಕದ್ದಾಗಿರುತ್ತದೆ. ಕೈ-ಬರಹ ಮುಖಾಂತರ ಹಾಗೂ ಹಳೆಯ ನಮೂನೆಯಲ್ಲಿ ನಮೂನೆ-9 ಮತ್ತು 11ನ್ನು ವಿತರಿಸುವ ಪದ್ದತಿಯನ್ನು ರದ್ದುಗೊಳಿಸಲಾಗಿರುತ್ತದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂದಿಸಿದಂತೆ ನಮೂನೆ-9, ನಮೂನೆ-11ಎ ಮತ್ತು ನಮೂನೆ-11ಬಿ ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ ಈಗಾಗಲೇ ಸರ್ಕಾರದ ಸುತ್ತೋಲೆಯಂತೆ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿರುತ್ತದೆ.

ಅದರಂತೆ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಇ-ಸ್ವತ್ತು ಮೂಲಕವೇ ನಮೂನೆ-9, 11ಎ ಮತ್ತು 11ಬಿ ನೀಡತಕ್ಕದ್ದು, ಯಾವುದೇ ಕಾರಣಕ್ಕೂ ಕೈ-ಬರಹ ಉತಾರಗಳನ್ನು ನೀಡದಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳಿಗೆ/ಕಾರ್ಯದರ್ಶಿಗಳಿಗೆ/ದ್ವಿತೀಯ ದರ್ಜೆಯ ಲೆಕ್ಕ ಸಹಾಯಕರುಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ರವರು ಸುತ್ತೋಲೆ ಮೂಲಕ ಸೂಚಿಸಿರುತ್ತಾರೆ. ಸದರಿ ಸೂಚನೆಯನ್ನು ಉಲ್ಲಂಘಿಸಿ, ಗ್ರಾಮ ಪಂಚಾಯತಿಯಲ್ಲಿ ಕೈ-ಬರಹ ಉತಾರವನ್ನು ನೀಡುವುದು ಕಂಡು ಬಂದಿದ್ದಲ್ಲಿ, ಅಂತಹ ಅಧಿಕಾರಿ/ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿರುತ್ತಾರೆ.

RELATED ARTICLES
- Advertisment -spot_img

Most Popular

error: Content is protected !!