ಬೆಳಗಾವಿ: ಮಹಾನಗರ ಪಾಲಿಕೆ ಬೆಳಗಾವಿ ಸದಸ್ಯ ರಿಯಾಜ್ ಕಿಲ್ಲೇದಾರ ಬಿ ಖಾತಾವನ್ನು ರಸ್ತೆಯಲ್ಲಿಯೇ ಕೊಡುವಂತೆ ಅಧಿಕಾರಿಗಳಿಗೆ ಕಿರುಕುಳ ನೀಡುವುದನ್ನು ಖಂಡಿಸಿ ಗುರುವಾರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಹಾನಗರ ಪಾಲಿಕೆ ಮುಂಬಾಗದಲ್ಲಿ ದರಣಿ ನಡೆಸಿದರು.
ಸರಕಾರ ಎ ಮತ್ತು ಬಿ ಖಾತಾ ಅಭಿಯಾನ ನಡೆಸುತ್ತಿದ್ದು ಆದರೆ ಪಾಲಿಕೆಯ ಸದಸ್ಯ ರಿಯಾಜ್ ಕಿಲ್ಲೇದಾರ, 18 ಗುಂಟೆ ಆಸ್ತಿಯನ್ನು ಬಿ ಖಾತೆ ಮಾಡಿಕೊಡಬೇಕು. ದಾಖಲಾತಿ ಇಲ್ಲದೆ ಮಾಡಿ ಕೊಡಬೇಕೆಂದು ಒತ್ತಡ ಹಾಕುತ್ತಿದು,ಕಾನೂನು ಬಾಹಿರವಾಗಿ ಕೆಲಸ ಮಾಡಿಕೊಡಬೇಕೆಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಇದರಿಂದ ಮುಕ್ತಿ ಕೊಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾಧ್ಯಮ ಜೊತೆ ಮಾತನಾಡಿದ ಸಂತೋಷ್ ಆಣಿಶೆಟ್ ಮಾತನಾಡಿ ಪಾಲಿಕೆಯ ಅಧಿಕಾರಿಗಳಿಗೆ ಜನಪ್ರತಿನಿಧಿಯಾದವರು ಮುಕ್ತ ಕೆಲಸ ಮಾಡಿಕೊಡಬೇಕು. ಈ ಹಿಂದೆಯೂ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಂದ್ರೆ ಅವರ ಮೇಲೂ ಇದೇ ರೀತಿ ದಬ್ಬಾಳಿಕೆ ಮಾಡಿದ್ದರು. ಹೀಗಾದರೆ ಪಾಲಿಕೆ ಅಧಿಕಾರಿಗಳು ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಪಾಲಿಕೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದರಣಿ ನಡೆಸಿದರು.