ಬೆಳಗಾವಿ: ಬಸ್ ನಿರ್ವಾಹಕನ ಮೇಲೆ ಹಲ್ಲೆ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಜಿಲ್ಲಾ ಘಟಕದ ವತಿಯಿಂದ ಶನಿವಾರ ಬೆಳಗಾವಿ ತಾಲೂಕಿನ ಮಾರೀಹಾಳ ಪೋಲಿಸ ಠಾಣೆಯ ಎದುರಗಡೆ ಪ್ರತಿಭಟನೆ ನಡೆಸಿದರು.
ಮಾರೀಹಾಳ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಲು ಬಂದ ಕರವೇ ಕಾರ್ಯಕರ್ತರು ಅಮಾಯಕ ಬಸ್ ನಿರ್ವಾಹಕನ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣ ಹಿಂಪಡೆಯಬೇಕು ಎಂದು ದರಣಿ ನಡೆಸಿದರು. ಈ ವೇಳೆ ಅಧಿಕಾರಿಗಳ ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಹಲ್ಲೆಗೊಳಗಾದ ಅಮಾಯಕ ಬಸ್ ನಿರ್ವಾಹಕನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿರುವಾಗಲೇ ನಿನ್ನೆ ತಡರಾತ್ರಿ ವೇಳೆಗೆ ಮಾರೀಹಾಳ ಪೋಲಿಸ್
ಠಾಣೆಯಲ್ಲಿ ನಿರ್ವಾಹಕರ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲು ಮಾಡಿರುವ ಪೋಲಿಸರ ವಿರುದ್ಧ ಧಿಕ್ಕಾರ ಕೂಗುತ್ತಾ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಅವರು ಮಾತನಾಡಿ ಈ ಪ್ರಕರಣದ ದಿಕ್ಕನ್ನು ಬದಲಿಸುವ ನಿಟ್ಟಿನಲ್ಲಿ ನಿರ್ವಾಹಕನ ಮೇಲೆ ಸುಳ್ಳು ಪೋಕ್ಸೋ ಪ್ರಕರಣವನ್ನು ದಾಖಲು ಮಾಡಿರುತ್ತಾರೆ ಎಂದು ದೂರಿದರು. ಈ ರೀತಿ ಪೋಲಿಸ್ ಇಲಾಖೆ ಮಾಡಿರಿವುದು ಖಂಡನಿಯ.
ತಕ್ಷಣ ಪೊಲೀಸರು ಪೋಕ್ಸೋ ಪ್ರಕರಣವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಕರವೇ ಉಗ್ರ ಹೋರಾಟಕ್ಕೆ ಕರೆ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪ್ರತಿಭಟನೆ ಮಾಡುತ್ತಿರುವ ಕರವೇ ಕಾರ್ಯಕರ್ತರನ್ನು ಪೋಲಿಸರು ವಶಕ್ಕೆ ಪಡೆದರು ಬಳಿಕ ಬಿಡಿಗಡೆಗೊಳಿಸಿದರು.