Tuesday, April 29, 2025
Google search engine
Homeಜಿಲ್ಲಾಜನಸ್ನೇಹಿ ಅಧಿಕಾರಿ ಪರುಶುರಾಮ ದುಡಗುಂಟಿ
spot_img

ಜನಸ್ನೇಹಿ ಅಧಿಕಾರಿ ಪರುಶುರಾಮ ದುಡಗುಂಟಿ

 ಬೆಳಗಾವಿ: ಬಹುಪಾಲು ಅಧಿಕಾರಿ ವರ್ಗ ಜನ ಸ್ಪಂದನೆಯಿಂದ ದೂರ ಇರುವುದು ಸರ್ವೇ ಸಾಮಾನ್ಯ. ಅದರಲ್ಲೂ ಉನ್ನತ ಅಧಿಕಾರಿಗಳನ್ನು ಭೇಟಿಮಾಡಲು ಶ್ರೀಸಾಮಾನ್ಯರಿರಲಿ, ಅಧಿಕಾರ ವರ್ಗದವರೇ ಹಿಂಜರಿಯುವುದುಂಟು. ಆದರೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರುಶುರಾಮ ದುಡಗುಂಟಿ ಅವರು ಇದಕ್ಕಿಂತ ಭಿನ್ನ ನೆಲೆಯಲ್ಲಿ ನಿಲ್ಲಬಲ್ಲ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

ಜಿಲ್ಲಾ ಪಂಚಾಯತ್ ಕಾರ್ಯ ವ್ಯಾಪ್ತಿಯಲ್ಲಿರುವ ಇತರೆ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರಜ ನಪರ ಅಧಿಕಾರಿ ಎಂಬ ಕೀರ್ತಿ ಗಳಿಸಿದ್ದಾರೆ.

ಆಗಾಗ ಶಾಲಾ-ಕಾಲೇಜುಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಪರಶುರಾಮ ದುಡಗುಂಟಿ ಭೇಟಿ ನೀಡಿದಾಗ ಅವರಿಗೆ ನೀಡುತ್ತಿದ್ದ ಗೌರವ ಕಂಡು ತಾವೂ ಜನಪ್ರಿಯ ಅಧಿಕಾರಿ ಆಗಬೇಕೆಂಬ ಹಂಬಲ ಚಿಗುರೊಡೆದು ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಗಳ ಪರೀಕ್ಷೆಗಳಲ್ಲಿ ಟಾಪರ್ ಆದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.

ಇವರು ಕ್ರೀಡಾಂಗಣ, ಮೈದಾನಗಳಲ್ಲಿ ಶ್ರೀಸಾಮಾನ್ಯರಂತೆ ಎಲ್ಲರೊಂದಿಗೆ ಕ್ರೀಡಾ ಮನೋಭಾವನೆ ಆಟ ಆಡುತ್ತಾರೆ. ಪರುಶುರಾಮ ದುಡಗುಂಟಿ ಅವರು ಪ್ರಚಾರ ಬಯಸದೆ ಮಾನವೀಯ ಹಿನ್ನೆಲೆಯ ವೃತ್ತಿಜೀವನ ನಡೆಸುತ್ತಿದ್ದಾರೆ.

ಗುಣದಲ್ಲಿ ಸರಳತೆಯೇ ವ್ಯಕ್ತಿಯಾಗಿದ್ದಾರೆ. ಇವರ ಗಾಂಭೀರ್ಯ-ನೇರ ನುಡಿ, ಸಂಕಷ್ಟದಲ್ಲಿದ್ದರಿಗೆ ತತ್‍ಕ್ಷಣದ ಸ್ಪಂದಿಸುವ ಹೃದಯವಂತಿಕೆಯಿದೆ. ನೇರ ನಿಷ್ಠುರ ಮಾತಾದರೂ ಮಾತಿನಲ್ಲಿ ಅರ್ಥ ತೂಕ ಎದ್ದು ಕಾಣುವ ಸ್ವಭಾವದ ವ್ಯಕ್ತಿತ್ವದಿಂದ ಜನರ ಜೊತೆಗೆ ಬೆರೆಯುತ್ತಾರೆ.

ಅಷ್ಟೇ ಅಲ್ಲದೇ ಇವರ ಮನೆ ಕನ್ನಡಮಯ ಮನೆ, ಕನ್ನಡಾಭಿಮಾನಿ. ತಮ್ಮ ಕಚೇರಿಯಲ್ಲಿ ಕನ್ನಡ ಕವಿಗಳು, ಇತಿಹಾಸಕಾರರು, ಸ್ವಾತಂತ್ರ್ಯ ಹೋರಾಟಗಾರ ಫೋಟೋಗಳು ಇರಿಸಲಾಗಿದೆ. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಕೊಂಡು ಬೆಳೆದ ಇವರು ಇತರೆ ಅಧಿಕಾರಿಗಳಿಗಿಂತ ಭಿನ್ನ ಎನ್ನಬಹುದು.

ಇವರ ಈ ಕನ್ನಡಾಭಿಮಾನಕ್ಕೆ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆ ಸಿಗುವುದು ಮಾತ್ರವಲ್ಲದೇ, ಸುದ್ದಿ ವಾಹಿನಿಗಳು, ಪತ್ರಿಕೆಗಳು ಇವರನ್ನು ಹೊಗಳಿ ಬರೆದು ಇತರರಿಗೆ ಇವರ ಕನ್ನಡ ಪ್ರೇಮ ತಲುಪಿಸಿವೆ.

ಇಂದಿನ ಕಾಲ ಮಾನಗಳಲ್ಲಿ ಜನಸ್ನೇಹಿ ಅಧಿಕಾರಿ ದೊರಕಿರುವುದು ಸುಕೃತ ಎನ್ನಬಹುದು. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರುಶುರಾಮ ದುಡಗುಂಟಿ ಅವರಿಗೆ ಭಗವಂತನು ಆಯುರಾರೋಗ್ಯ, ಸಿರಿಸಂಪದಗಳನ್ನು ಅನುಗ್ರಹಿಸಲಿ, ತನ್ಮೂಲಕ ಅವರ ಸೇವೆಯ ಪ್ರಯೋಜನ ಜನತೆಗೆ ಅಧಿಕಾಧಿಕವಾಗಿ ಲಭಿಸಿ ಜನತೆಯ ಬದುಕು ಹಸನಾಗಲಿ ಎಂದು ‘ಸಮರ್ಥನಾಡು ಪತ್ರಿಕೆ’ ಹಾರೈಸುತ್ತದೆ.

RELATED ARTICLES
- Advertisment -spot_img

Most Popular

error: Content is protected !!